ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ಫಿಲ್ ಸಾಲ್ಟ್ ‘ಕ್ಯಾಚ್’ ಬಗ್ಗೆ ಸುನಿಲ್ ಗವಾಸ್ಕರ್ ಅಪಸ್ವರ


ಫಿಲ್ ಸಾಲ್ಟ್ ಕ್ಯಾಚ್: ಗವಾಸ್ಕರ್‌ಗೆ ಅನುಮಾನ! ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಫಿಲ್ ಸಾಲ್ಟ್ ಹಿಡಿದ ಕ್ಯಾಚ್ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಆಟಗಾರ ಸಾಲ್ಟ್ ಬೌಂಡರಿ ಲೈನ್​ನಲ್ಲಿ ಹೆನ್ರಿಕ್ ಕ್ಲಾಸೆನ್ ನೀಡಿದ ಕ್ಯಾಚ್ ಅನ್ನು ಹಿಡಿದರು. ಈ ವೇಳೆ ಸಾಲ್ಟ್ ಅವರ ಕಾಲು ಅಥವಾ ದೇಹ ಬೌಂಡರಿ ಹಗ್ಗಕ್ಕೆ ತಗುಲಿದೆಯೇ ಎಂಬ ಗೊಂದಲ ಸೃಷ್ಟಿಯಾಗಿತ್ತು. ಇದನ್ನು ಪರಿಶೀಲಿಸಿದ ಮೂರನೇ ಅಂಪೈರ್, ಔಟ್ ಎಂದು ತೀರ್ಪು ನೀಡಿದ್ದರು. ಮೂರನೇ ಅಂಪೈರ್ ತೀರ್ಪು ನೀಡುತ್ತಿದ್ದಂತೆ, ಕಾಮೆಂಟರಿ ಮಾಡುತ್ತಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅಸಮಾಧಾನ ಹೊರಹಾಕಿದರು. ಕ್ಯಾಚ್ ಹಿಡಿಯುವ ಭರದಲ್ಲಿ ಫಿಲ್ ಸಾಲ್ಟ್ ಅವರ ದೇಹ ಬೌಂಡರಿ ಹಗ್ಗಕ್ಕೆ ತಗುಲಿದಂತೆ ಕಾಣುತ್ತಿದೆ ಮತ್ತು ಹಗ್ಗ ಸ್ವಲ್ಪ ಸರಿದಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟರು. ರೀಪ್ಲೇಗಳನ್ನು ನೋಡಿದಾಗ ಕೆಲವು ಕೋನಗಳಿಂದ ಇದು ಔಟ್ ಎಂದು ಕಂಡರೂ, ಇನ್ನು ಕೆಲವು ಕಡೆಯಿಂದ ಹಗ್ಗ ಸರಿದಿರುವುದು ಸ್ಪಷ್ಟವಾಗಿತ್ತು. ಗವಾಸ್ಕರ್ ಅವರು, “ಇದು ಕ್ಲೀನ್ ಕ್ಯಾಚ್ ಹೌದೇ ಎಂಬ ಬಗ್ಗೆ ಅನುಮಾನವಿದೆ” ಎಂದರು. ಮೂರನೇ ಅಂಪೈರ್ ಕ್ಲಾಸೆನ್ ಅವರ ಕ್ಯಾಚನ್ನು ವಿವಿಧ ಕೋನಗಳಿಂದ ಪರಿಶೀಲಿಸಲು ಹೆಚ್ಚಿನ ಸಮಯವನ್ನು ವಿನಿಯೋಗಿಸಬೇಕಿತ್ತು. ಇಂತಹ ಸಂದೇಹಾಸ್ಪದ ಸಂದರ್ಭಗಳಲ್ಲಿ, ಇದರ ಲಾಭವು ಬ್ಯಾಟರ್‌ಗೆ ಸಿಗಬೇಕಿತ್ತು. ಆದರೆ ಮೂರನೇ ಅಂಪೈರ್ ಸರಿಯಾಗಿ ಪರಿಶೀಲಿಸದೇ ಬೇಗನೆ ಔಟ್ ನೀಡಿರುವುದು ತಪ್ಪು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಅಂಪೈರ್ ರೋಹನ್ ಪಂಡಿತ್ ಅವರು ‘ಔಟ್’ ಎಂದು ತೀರ್ಪು ನೀಡುತ್ತಿದ್ದಂತೆ ಹೆನ್ರಿಕ್ ಕ್ಲಾಸೆನ್ ಸಹ ಮೈದಾನದಲ್ಲೇ ಕೋಪಗೊಂಡು ಅಸಮಾಧಾನ ಹೊರಹಾಕಿದ್ದರು. ಇದೀಗ ಈ ಕ್ಯಾಚ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಮುಂದುವರೆದಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 201 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಆರ್​ಸಿಬಿ ತಂಡ ಕೇವಲ 15.4 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ.
ಇತ್ತೀಚಿನ ಸುದ್ದಿಗಳು

ನಮ್ಮ ಚಂದಾದಾರರಾಗಿ (Subscribe Now)

Daily Plan

₹1 / 1 Day

Get full access to all premium news for 24 hours.

POPULAR

Weekly Plan

₹6 / 7 Days

Full access to Gulf Kannadiga news for one entire week.

Monthly Plan

₹25 / 30 Days

Best value for regular readers. Full monthly access.

* Payment system is being integrated. Please check back later.

×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW