ವಿವಾಹವಾದ ಕೆಲವೇ ಗಂಟೆಗಳಲ್ಲಿ ತಾನು ಆರು ತಿಂಗಳ ಗರ್ಭಿಣಿ ಎಂದ ನಟನ ಪತ್ನಿ
Friday, August 1, 2025
ಮುಂಬೈ: ವಿವಾಹವಾದ ಕೆಲವೇ ಗಂಟೆಯಲ್ಲಿ ತಾನು ಆರು ತಿಂಗಳ ಗರ್ಭಿಣಿ ಎಂದು ನಟ ಮಾಧಂಪಟ್ಟಿ ರಂಗರಾಜ್ ಅವರ ಎರಡನೇ ಪತ್ನಿ ಜಾಯ್ ಕ್ರಿಜಿಲ್ಲಾ ಘೋಷಿಸಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಜಾಯ್ ಕ್ರಿಜಿಲ್ಡಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ, "ಬೇಬಿ ಲೋಡಿಂಗ್ 2025.. ನಾನು ಗರ್ಭಿಣಿಯಾಗಿದ್ದೇನೆ. ಇದು ಆರನೇ ತಿಂಗಳು" ಎಂದು ಬರೆದು ಕೊಂಡಿದ್ದಾರೆ. ಈ ಸಿಹಿ ಸುದ್ದಿಯನ್ನು ಹಂಚಿಕೊಳ್ಳುತ್ತಾ, ತಮ್ಮ ಪತಿಯ ಪಕ್ಕದಲ್ಲಿರುವ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ.
ಮಾಧಂಪಟ್ಟಿ ರಂಗರಾಜ್ ಅವರು ಜಾಯ್ ಅವರನ್ನು ದೇವಸ್ಥಾನದಲ್ಲಿ ವಿವಾಹವಾದರು ಎಂದು ಅಧಿಕೃತವಾಗಿ ಘೋಷಿಸಿದ್ದರು. ನಟ ಚೆಫ್ ಮಾಧಂಪಟ್ಟಿ ರಂಗರಾಜ್ ಅವರಿಗೆ ಇದು ಎರಡನೇ ವಿವಾಹವಾಗಿದ್ದು, ಮೊದಲ ಪತ್ನಿಯಿಂದ ಇಬ್ಬರು ಮಕ್ಕಳಿದ್ದಾರೆ.
ಮಾಧಂಪಟ್ಟಿ ರಂಗರಾಜ್ ಮೊದಲ ಪತ್ನಿ ಶ್ರುತಿ ರಂಗರಾಜ್ ತಮಿಳುನಾಡಿನ ಕೊಯಮತ್ತೂರಿನಲ್ಲಿ ನೆಲೆಸಿರುವ ವಕೀಲೆ. ವಕೀಲೆ ಕೆಲವು ವಾರಗಳ ಹಿಂದಿನವರೆಗೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರು, ತಮ್ಮ ಪುತ್ರರೊಂದಿಗೆ ಚಿತ್ರಗಳನ್ನು ಸಹ ಪೋಸ್ಟ್ ಮಾಡುತ್ತಿದ್ದರು.
ಮಾಧಂಪೆಟ್ಟಿ ರಂಗರಾಜ್ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ಶ್ರುತಿ ರಂಗರಾಜ್ ಇನ್ನೂ ಅವರ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪಿನ್ ಮಾಡಿದ್ದಾರೆ. ಬಯೋದಲ್ಲಿ "ಮಾಧಂಪಟ್ಟಿ ರಂಗರಾಜ್ ಅವರ ಪತ್ನಿ” ಎಂದು ಬರೆದಿದ್ದರೂ, ಅವರ ಅಧಿಕೃತ ಪ್ರತಿಕ್ರಿಯೆ ಇನ್ನೂ ಬಂಧಿಲ್ಲ.
ಮಾಧಂಪಟ್ಟಿ ರಂಗರಾಜ್ ಓರ್ವ ಜನಪ್ರಿಯ ನಟ ಮತ್ತು ಬಾಣಸಿಗ. ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಾಣಸಿಗ 1999ರಲ್ಲಿ ಆಹಾರ ವ್ಯವಹಾರದಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು. ಬಳಿಕ ಬೆಂಗಳೂರಿನಲ್ಲಿ ಅವರು ರೆಸ್ಟೋರೆಂಟ್ ತೆರೆದಿದ್ದರು. ರಂಗರಾಜ್ ಮೆಹಂದಿ ಸರ್ಕಸ್ (2019) ಎಂಬ ಪ್ರಣಯ ನಾಟಕ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸುವ ಮೂಲಕ ಹೆಸರು ಗಳಿಸಿದರು. ರಾಜು ಮುರುಗನ್ ಬರೆದ ಈ ಸಿನಿಮಾವನ್ನು ಚಲನಚಿತ್ರ ನಿರ್ಮಾಪಕರ ಅಣ್ಣ ಸರವಣ ರಾಜೇಂದ್ರನ್ ನಿರ್ದೇಶಿಸಿದ್ದಾರೆ.