ಪ್ರತಿದಿನ ಕಾಫಿ ಕುಡಿದ್ರೆ ಏನೆಲ್ಲಾ ಆಗುತ್ತೆ ಗೊತ್ತಾ? ಕಾಫಿ ಪ್ರಿಯರು ಓದಲೇ ಬೇಕು ಈ ಸ್ಟೋರಿ!
ದಿನವೂ ಕಾಫಿ ಕುಡಿಯುವ ಅಭ್ಯಾಸವಿರುವವರು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳನ್ನು ನಾವು ಇಲ್ಲಿ ಹೇಳುತ್ತೇವೆ. ಪ್ರತಿದಿನ ಕಾಫಿ ಕುಡಿಯುವ ಅಭ್ಯಾಸ ನಿಮ್ಮ ರಕ್ತದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಕಾಫಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ. ಮಧುಮೇಹಿಗಳು ಕಾಫಿ ಕುಡಿಯಬಹುದೇ ಎಂಬುದರ ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ. ಮಾತ್ರವಲ್ಲ ಮಧುಮೇಹಿಗಳು ಯಾವ ರೀತಿಯ ಕಾಫಿ ಕುಡಿಯುವುದು ಉತ್ತಮ ಎಂಬುದನ್ನು ನಾವಿಲ್ಲಿ ಹೇಳುತ್ತೇವೆ.
ಅನೇಕರಿಗೆ ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಇವರು ತಮ್ಮ ದಿನವನ್ನು ಒಂದು ಕಪ್ ಕಾಫಿಯೊಂದಿಗೆ ಪ್ರಾರಂಭಿಸುತ್ತಾರೆ. ಅಲ್ಲದೆ, ಕಚೇರಿಗಳಲ್ಲಿ ಕೆಲಸ ಮಾಡುವವರು ಕಾಫಿ ಕುಡಿಯುವುದಕ್ಕಾಗಿಯೇ ವಿರಾಮ ತೆಗೆದುಕೊಳ್ಳುತ್ತಾರೆ.
ವಿಶೇಷವೆಂದರೆ ಕೆಲವರಿಗೆ ಕಾಫಿ ಕೇವಲ ಪಾನೀಯವಲ್ಲ. ಒಂದು ರೀತಿಯ ಚೈತನ್ಯ ತುಂಬುವ ಬೂಸ್ಟ್. ಕಚೇರಿಯಲ್ಲಿ ಬಹಳ ಸಮಯಗಳ ಕಾಲ ಕುಳಿತು ಕೆಲಸ ಮಾಡಿದ ಬಳಿಕ ಕಾಫಿ ಕುಡಿಯುವುದರಿಂದ ಆಯಾಸ ಕಡಿಮೆಯಾಗುತ್ತದೆ ಎಂಬ ಭಾವನೆ ಹಲವರಿಗಿದೆ. ಆದರೆ ಪ್ರತಿದಿನ ಕಾಫಿ ಕುಡಿಯುವ ಅಭ್ಯಾಸ ನಿಮ್ಮ ರಕ್ತದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಪ್ರತಿದಿನ ಕಾಫಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಮಧುಮೇಹ ಇರುವವರು ಕಾಫಿ ಸೇವಿಸಬಹುದೇ ಎಂಬುದರ ಕುರಿತ ಮಾಹಿತಿ ಈ ಸ್ಟೋರಿಯಲ್ಲಿದೆ.
ಕಾಫಿಯಲ್ಲಿ ಕೆಫೀನ್ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲವು ಅಧ್ಯಯನಗಳು (ಮೇಯೊ ಕ್ಲಿನಿಕ್, ವೆಬ್‌ಎಂಡಿ) ಈ ಕೆಫೀನ್ ತಾತ್ಕಾಲಿಕವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತದೆ. ಏಕೆಂದರೆ ಕೆಫೀನ್ ಅಡ್ರಿನಾಲಿನ್‌ನಂತಹ ಒತ್ತಡದ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ. ಇದು ತಾತ್ಕಾಲಿಕವಾಗಿ ಸಕ್ಕರೆಯನ್ನು ಸಂಸ್ಕರಿಸುವ ಜೀವಕೋಶಗಳ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
ಇದು ಇನ್ಸುಲಿನ್ ಸೂಕ್ಷ್ಮತೆಯ ಮೇಲೂ ಪರಿಣಾಮ ಬೀರುತ್ತದೆ. ಅಂದರೆ ನಿಮ್ಮ ದೇಹದ ಜೀವಕೋಶಗಳು ಇನ್ಸುಲಿನ್ ಹಾರ್ಮೋನ್‌ಗೆ ಸೂಕ್ತವಾಗಿ ಪ್ರತಿಕ್ರಿಯಿಸುವುದಿಲ್ಲ. ಈ ವಿಷಯ ಸ್ವಲ್ಪ ಗೊಂದಲಮಯವಾಗಿ ಕಾಣಿಸಬಹುದು. ಕೆಫೀನ್ ಜೊತೆಗೆ, ಕಾಫಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಮೆಗ್ನೀಸಿಯಮ್ ನಂತಹ ಅನೇಕ ಇತರ ಜೈವಿಕ ಸಕ್ರಿಯ ಸಂಯುಕ್ತಗಳಿವೆ. ಈ ಅಂಶಗಳು ದೇಹದಲ್ಲಿ ಉರಿಯೂತದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಕೆಲವು ಅಧ್ಯಯನಗಳು ಇದು ದೀರ್ಘಾವಧಿಯಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತದೆ.
ನೀವು ಯಾವ ರೀತಿಯ ಕಾಫಿ ಕುಡಿಯುತ್ತಿದ್ದೀರಿ ಎಂಬುದರ ಮೇಲೆ ನಿಮ್ಮ ಸಮಸ್ಯೆ ನಿರ್ಧಾರವಾಗುತ್ತದೆ. ಕಾಫಿಗೆ ಸಕ್ಕರೆ, ಕ್ರೀಮ್ ಅಥವಾ ಫ್ಲೇವರ್ಡ್ ಸಿರಪ್‌ಗಳನ್ನು ಸೇರಿಸುವುದರಿಂದ ಖಂಡಿತವಾಗಿಯೂ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಆದರೆ ಸಕ್ಕರೆ ಮತ್ತು ಹಾಲು ಇಲ್ಲದೆ ಬ್ಲಾಕ್ ಕಾಫಿಯಲ್ಲಿ ಕ್ಯಾಲೊರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳು ಬಹಳ ಕಡಿಮೆ. ಅದಕ್ಕಾಗಿಯೇ ತಜ್ಞರು ಬ್ಲಾಕ್ ಕಾಫಿ ಒಳ್ಳೆಯ ಆಯ್ಕೆ ಎಂದು ಹೇಳುತ್ತಾರೆ.