ಮಂಗಳೂರಿನಲ್ಲಿ 28 ವರ್ಷದ ವಿವಾಹಿತೆ ಆತ್ಮಹತ್ಯೆ


(ಗಲ್ಪ್ ಕನ್ನಡಿಗ)ಮಂಗಳೂರು: 28 ವರ್ಷದ ವಿವಾಹಿತೆಯೊಬ್ಬಳು  ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುಪುರದಲ್ಲಿ ನಡೆದಿದೆ.(ಗಲ್ಪ್ ಕನ್ನಡಿಗ)ಗುರುಪುರದ ಭಜನಾ ಮಂದಿರ ಸಮೀಪದ ನಿವಾಸಿ ಶಿಲ್ಪಾ(28) ಆತ್ಮಹತ್ಯೆ ಮಾಡಿಕೊಂಡವರು.ಇವರು ಬಜ್ಪೆ ಪೇಟೆಯ ಜ್ಯುವೆಲ್ಲರಿ ಅಂಗಡಿಯೊಂದರ ಮಾಲಕರ ಪುತ್ರಿ. 


(ಗಲ್ಪ್ ಕನ್ನಡಿಗ)
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಇವರು ಲಾಕ್ ಡೌನ್ ಬಳಿಕ  ಊರಿಗೆ ಬಂದಿದ್ದರು.  ಊರಿನಿಂದಲೇ ಈಕೆ ವರ್ಕ್ ಫ್ರಂ ಹೋಮ್ ಕರ್ತವ್ಯ  ನಿರ್ವಹಿಸುತ್ತಿದ್ದರು. ಇವರ ಪತಿ ಬೆಂಗಳೂರಿನಲ್ಲಿದ್ದು ಇವರಿಗೆ  11 ತಿಂಗಳ ಮಗುವೊಂದಿದೆ 

(ಗಲ್ಪ್ ಕನ್ನಡಿಗ)ಆತ್ಮಹತ್ಯೆ ಗೆ ನಿಖರ ಕಾರಣ ತಿಳಿದುಬಂದಿಲ್ಲ.ಆಕೆ ಬರೆದಿರುವ ಡೆತ್ ನೋಟ್ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಗಲ್ಪ್ ಕನ್ನಡಿಗ)