-->

ಮಂಗಳೂರು;ವದಂತಿ ನಂಬಬೇಡಿ- ಪಿಂಕಿ ನವಾಜ್ ಕೊಲೆಯತ್ನಕ್ಕೂ, ದೀಪಕ್ ರಾವ್ ಕೊಲೆಗೂ ಮೇಲ್ನೋಟಕ್ಕೆ ಸಂಬಂಧವಿಲ್ಲ!

ಮಂಗಳೂರು;ವದಂತಿ ನಂಬಬೇಡಿ- ಪಿಂಕಿ ನವಾಜ್ ಕೊಲೆಯತ್ನಕ್ಕೂ, ದೀಪಕ್ ರಾವ್ ಕೊಲೆಗೂ ಮೇಲ್ನೋಟಕ್ಕೆ ಸಂಬಂಧವಿಲ್ಲ!


ಮಂಗಳೂರು; ಮಂಗಳೂರಿನಲ್ಲಿ ಇಂದು ಸಂಜೆಯ ವೇಳೆಗೆ ಆತಂಕ ಸೃಷ್ಟಿಸುವ ವದಂತಿಗಳು ಹರಡುತ್ತಿದೆ. ದೀಪಕ್ ರಾವ್ ಕೊಲೆ ಯತ್ನ ಆರೋಪಿಯ ಕೊಲೆ ನಡೆದಿದೆ ಎಂದು ಬಾಯಿಂದ ಬಾಯಿಗೆ ಸುದ್ದಿಗಳು ಹರಿದಾಡುತ್ತಿದೆ.  ಕಳೆದ ಬಾರಿ ಕೋಮುಗಲಭೆಗೆ ಕಾರಣವಾಗಿದ್ದ ದೀಪಕ್ ರಾವ್ ಕೊಲೆಗೆ ಸಂಬಂಧವಿರಬಹುದೆ ಎಂಬ ಆತಂಕ ಜನರಲ್ಲಿ ಮೂಡಿಸಿದೆ. 

ನಡೆದದ್ದು ಏನು?

2018  ಜನವರಿ 3 ರಂದು ದೀಪಕ್ ರಾವ್ ಎಂಬ ಯುವಕನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ಪಿಂಕಿ ನವಾಜ್ ನನ್ನು ಸುರತ್ಕಲ್ ನ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳ ತಂಡ ತಲವಾರಿನಿಂದ ದಾಳಿ ಮಾಡಿ ಹತ್ಯೆ ಗೆ ಯತ್ನಿಸಿದೆ. ಈ ಹತ್ಯೆ ಗೆ ಯತ್ನ ಮಾಡಿದ್ದು ಶಾಕಿಬ್ ಯಾನೆ ಶಬ್ಬು ಎಂಬಾತನ ತಂಡ.ಐವರ ತಂಡ ಕಾರಿನಲ್ಲಿ ಬಂದು ಪಿಂಕಿ ನವಾಜ್ ನನ್ನು ಅಟ್ಟಾಡಿಸಿಕೊಂಡು ತಲವಾರಿನಿಂದ ಹಲ್ಲೆ ಮಾಡಿದೆ. ಘಟನೆಯಲ್ಲಿ ಪಿಂಕಿ ನವಾಜ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲೆಗೆ ಸ್ಕೆಚ್ ಹಾಕಿದ ಶಾಕಿಬ್ ಸರಗಳ್ಳತನ ಮತ್ತು ಇತರ ಪ್ರಕರಣಗಳ ಆರೋಪಿಯಾಗಿದ್ದಾನೆ.ಮೇಲ್ನೋಟಕ್ಕೆ ಶಾಕಿಬ್ ಮತ್ತು ಪಿಂಕಿ ನವಾಜ್ ನ ವೈಯಕ್ತಿಕ ದ್ವೇಷ ಎಂದು ತಿಳಿದುಬಂದಿದೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99