ಮಂಗಳೂರಿಗೆ ಬಂದು ಕೇರಳ ವಿದ್ಯಾರ್ಥಿಗಳ ದರ್ಬಾರ್; ಬೆಂಕಿ ಕಡ್ಡಿಯಲ್ಲಿ ಕ್ಲಾಸ್ ರೂಂ ಅಳತೆ ಮಾಡಬೇಕಂತೆ...
Thursday, February 11, 2021
ಬೆಂಕಿ ಕಡ್ಡಿಯನ್ನು ಎಣಿಸಬೇಕು...
ಬೆಂಕಿ ಕಡ್ಡಿಯಲ್ಲಿ ಕ್ಲಾಸ್ ರೂಂ ಅಳತೆ ಮಾಡಬೇಕು...
ಮೀಸೆ ಬೋಳಿಸಬೇಕು...
ತಲೆಕೂದಲು ಸಣ್ಣದಾಗಿ ಕತ್ತರಿಸಬೇಕು...
ಕೇರಳದಿಂದ ಬಂದ 18 ವಿದ್ಯಾರ್ಥಿಗಳು ಕೇರಳದಿಂದಲೇ ಬಂದ ವಿದ್ಯಾರ್ಥಿಗಳು ಐವರು ವಿದ್ಯಾರ್ಥಿಗಳಿಗೆ ಮಾಡಿದ ಆದೇಶವಿದೆ. ಮೊದಲ ವರ್ಷದ ಕೇರಳ ಮೂಲದ ಐವರು ವಿದ್ಯಾರ್ಥಿಗಳಿಗೆ ಕೇರಳದಿಂದಲೆ ಬಂದ 18 ವಿದ್ಯಾರ್ಥಿಗಳು ಮಾಡಿದ ರ‌್ಯಾಗಿಂಗ್ ಇದು.
ದೇರಳಕಟ್ಟೆಯ ಕಣಚೂರು ನರ್ಸಿಂಗ್ ಕಾಲೇಜಿನಲ್ಲಿ ಈ ರೀತಿ ರ‌್ಯಾಗಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 11 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ರ‌್ಯಾಗಿಂಗ್ ಗೆ ಒಳಗಾದ ಐವರು ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳ ಶೋಷಣೆಯನ್ನು ಮ್ಯಾನೆಜ್‌ಮೆಂಟ್ ಗಮನಕ್ಕೆ ತಂದಿದ್ದು ಮ್ಯಾನೆಜ್‌ಮೆಂಟ್ ಪೊಲೀಸ್ ದೂರು ನೀಡಿತ್ತು. ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು
ಜಫಿನ್ ರೋಯ್ಚಾನ್, ಅಕ್ಷಯ್ ಕೆ.ಎಸ್., ಜಬಿನ್ ಮೊಹಮ್ಮದ್, ಜೆರೋನ್ ಸಿರಿಲ್, ರಾಬಿನ್ ಬಿಜು, ಅಬ್ದುಲ್ ಜಸಿತ್, ಅವಿನ್ ಜಾನ್, ಅಶಿನ್ ಬಾಬು, ಮೊಹಮ್ಮದ್ ಸೂರಜ್, ಅಬ್ದುಲ್ ಅನಾಸ್, ಮೊಹಮ್ಮದ್ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.