-->

ಮೇ 15ರ ನಂತರ ಈ 6 ರಾಶಿಗಳಿಗೆ ಮಂಗಳಕರ... ಅದೃಷ್ಟದ ರಾಶಿಗಳು ಯಾವುದು ನೋಡಿ...

ಮೇ 15ರ ನಂತರ ಈ 6 ರಾಶಿಗಳಿಗೆ ಮಂಗಳಕರ... ಅದೃಷ್ಟದ ರಾಶಿಗಳು ಯಾವುದು ನೋಡಿ...


ಮೇಷ ರಾಶಿ

ವೃಷಭ ರಾಶಿಗೆ ಸೂರ್ಯನ ಪ್ರವೇಶವು ಮೇಷ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಆಸ್ತಿ ಖರೀದಿಸಬಹುದು.ಮಾತ್ರವಲ್ಲ, ಆದಾಯದ ಬಹು ಪಾಲನ್ನು ಉಳಿಸುವುದು ಕೂಡಾ ಸಾಧ್ಯವಾಗುತ್ತದೆ. ಹಣದ ಬಗ್ಗೆ ಈ ರಾಶಿಯವರಿಗೆ ಬಹಳ ವ್ಯಾಮೋಹವಿದೆ. ಇದೀಗ ಬಯಸಿದಷ್ಟು ಹಣ ಕೈ ಸೇರಿ ಖುಷಿ ಹೆಚ್ಚಾಗುತ್ತದೆ. 

ವೃಷಭ ರಾಶಿ 

ಸೂರ್ಯನು ವೃಷಭ ರಾಶಿಯನ್ನು ಪ್ರವೇಶಿಸುತ್ತಿದ್ದು, ಈ ರಾಶಿಯವರಿಗೆ ದೊಡ್ಡ ಲಾಭವನ್ನೇ ನೀಡಲಿದ್ದಾನೆ. ಈ ರಾಶಿಯವರು ಕೆಲಸದಲ್ಲಿ ದೊಡ್ಡ ಸ್ಥಾನವನ್ನು ಪಡೆಯಬಹುದು. ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಪಡೆಯಬಹುದು. ಆದಾಯದಲ್ಲಿ ಭಾರೀ ಹೆಚ್ಚಳವಾಗುವ ಸಾಧ್ಯತೆ ಇದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ. ವೃತ್ತಿ ಬದುಕಿನಲ್ಲಾಗುವ ಈ ಮಹತ್ವದ ಬದಲಾವಣೆಯಿಂದ ಬದುಕು ದೊಡ್ಡ ತಿರುವು ಪಡೆದುಕೊಳ್ಳಲಿದೆ. 


ಕಟಕ ರಾಶಿ

ಸೂರ್ಯನ ಸಂಚಾರದಿಂದ ಕಟಕ ರಾಶಿಯವರಿಗೆ ಆರ್ಥಿಕ ಲಾಭ ಸಿಗಬಹುದು. ಉದ್ಯೋಗವಿರಲಿ, ವ್ಯಾಪಾರವಿರಲಿ ಎರಡರಲ್ಲಿಯೂ ಪ್ರಗತಿಯನ್ನು ಪಡೆಯುತ್ತಾರೆ. ಹಣಕಾಸಿನ ಹೂಡಿಕೆ ಪ್ರಯೋಜನಕಾರಿಯಾಗಲಿದೆ. ಗೌರವ ಹೆಚ್ಚಾಗಲಿದೆ. ಪ್ರಯಾಣವನ್ನು ಬಹಳ ಇಷ್ಟ ಪಡುವ ಈ ರಾಶಿಯವರಿಗೆ ಕನಸಿನ ಪ್ರಯಾಣಕ್ಕೆ ಹಣ ಕೂಡಿಡುವುದು ಸಾಧ್ಯವಾಗುತ್ತದೆ. ಭವಿಷ್ಯದ ಬಗೆಗಿನ ಆತಂಕಗಳೆಲ್ಲ ಮಂಜಿನಂತೆ ಮಾಯವಾಗಬಹುದು. ಸುರಕ್ಷತಾ ಭಾವ ಮನಸ್ಸನ್ನು ಆವರಿಸಬಹುದು. 

ಸಿಂಹ ರಾಶಿ 

ಸೂರ್ಯನ ರಾಶಿಯ ಬದಲಾವಣೆಯು ಸಿಂಹ ರಾಶಿಯವರಿಗೆ ಗೌರವ, ಹಣ, ಸ್ಥಾನಮಾನವನ್ನು ತರುತ್ತದೆ. ಪ್ರಯಾಣ ಬೆಳೆಸುವ ಅವಕಾಶವಿರುತ್ತದೆ. ಪ್ರಯಾಣವು ಪ್ರಯೋಜನಕಾರಿಯಾಗಿ ಪರಿಣಮಿಸಲಿದೆ. ಉದ್ಯೋಗದಲ್ಲಿ ದಿಢೀರ್ ಭತ್ಯೆ ಹೆಚ್ಚಾಗಬಹುದು. ಭಡ್ತಿ ಸಿಕ್ಕಿ ದೊಡ್ಡ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ. ಅಂದುಕೊಂಡ ಆಸೆಗಳೆಲ್ಲ ಈಡೇರುವವು. ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದೆ. 

ಕನ್ಯಾರಾಶಿ 

ಕನ್ಯಾ ರಾಶಿಯ ಜನರು ಸೂರ್ಯನ ರಾಶಿಚಕ್ರದ ಚಿಹ್ನೆಯ ಬದಲಾವಣೆಯೊಂದಿಗೆ ಅದೃಷ್ಟವನ್ನು ಪಡೆಯುತ್ತಾರೆ. ಈ ರಾಶಿಯವರಿಗೆ ಈ ಒಂದು ತಿಂಗಳಲ್ಲಿ ಅದೃಷ್ಟವು ಉಜ್ವಲವಾಗಿ ಬೆಳಗುತ್ತದೆ ಮತ್ತು ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ಲಭಿಸುತ್ತದೆ. ಜೀವನದಲ್ಲಿ ಸಂತೋಷ ಬರುತ್ತದೆ. ಅಂದುಕೊಂಡ ಕೆಲಸ ಕಾರ್ಯಗಳೆಲ್ಲ ಸುಗಮವಾಗಿ ಆಗುತ್ತದೆ. ಮನೆ ಕಟ್ಟುವ, ಖರೀದಿ ಮಾಡುವ ಸಾಧ್ಯತೆ ಇದೆ. ಆದರೆ ಹಣವನ್ನು ಇತರರಿಗೆ ಸಾಲ ರೂಪದಲ್ಲಿ ಕೊಡುವಾಗ ಎಚ್ಚರ ಇರಲಿ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99