-->
ಸ್ನೇಹಿತನೊಂದಿಗೆ ಮನೆ ಬಿಟ್ಟು ಹೋಗುತ್ತೇನೆಂದ ಪುತ್ರಿಯನ್ನು ಕತ್ತು ಹಿಚುಕಿ ಹತ್ಯೆಗೈದ ತಾಯಿ

ಸ್ನೇಹಿತನೊಂದಿಗೆ ಮನೆ ಬಿಟ್ಟು ಹೋಗುತ್ತೇನೆಂದ ಪುತ್ರಿಯನ್ನು ಕತ್ತು ಹಿಚುಕಿ ಹತ್ಯೆಗೈದ ತಾಯಿ



ಉಡುಪಿ: ಸ್ನೇಹಿತನೊಂದಿಗೆ ಮನೆ ಬಿಟ್ಟು ಹೋಗುತ್ತೇನೆಂದ 17ವರ್ಷದ ಪುತ್ರಿಯನ್ನು ತಾಯಿಯೇ ಕತ್ತು ಹಿಚುಕಿ ಹತ್ಯೆಗೈದ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಹಿರ್ಗಾನ ನಿವಾಸಿ ಶೇಖ್ ಮುಸ್ತಫಾ ಎಂಬವರ ಮಗಳು ಶಿಫನಾಝ್ (17) ಮೃತಪಟ್ಟವಳು. ಆರೋಪಿ ಗುಲ್ಜಾರ್ ಬಾನು (45)ವನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸೆಪ್ಟೆಂಬರ್ 20ರಂದು ತಾಯಿ-ಮಗಳ ನಡುವೆ ಪ್ರೀತಿಯ ವಿಚಾರದಲ್ಲಿ ಜಗಳ ಉಂಟಾಗಿ ಹತ್ಯೆ ನಡೆದಿತ್ತು.

ಶಿಫನಾಝ್ ತನ್ನ ಸ್ನೇಹಿತನೊಂದಿಗೆ ಮನೆ ಬಿಟ್ಟು ಹೋಗುವುದಾಗಿ ಹೇಳಿದ್ದಳು. ಇದರಿಂದ ಕುಪಿತಗೊಂಡ ತಾಯಿ, ಪುತ್ರಿಯ ಬಾಯಿಗೆ ಬಟ್ಟೆ ತುರುಕಿ, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ, ಶಿಫನಾಝ್ ತಂದೆ ಮುಸ್ತಫಾ ತನ್ನ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಶಿಫನಾಝ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬುದು ತಿಳಿದು ಬಂದಿತ್ತು. ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ. ಹೆತ್ತವರನ್ನು ವಿಚಾರಿಸಿದಾಗ ತಾಯಿಯೇ ಮರ್ಯಾದೆ ಗಂಜಿ ಪುತ್ರಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

ಅ.2ರಂದು ಆರೋಪಿತೆಯನ್ನು ಕಾರ್ಕಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article