ಬೆಳ್ತಂಗಡಿ: ಮಹಿಳೆಯನ್ನು ಬಚಾವ್ ಮಾಡಲು ಹೋಗಿ ನಡುರಸ್ತೆಯಲ್ಲೇ ಪಲ್ಟಿಯಾದ ಟೆಂಪೊ ಟ್ರಾವೆಲರ್
Saturday, October 4, 2025
ಬೆಳ್ತಂಗಡಿ: ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ತಪ್ಪಿಸಲು ಟೆಂಪೋ ಟ್ರಾವೆಲರ್ ನಡುವರಸ್ತೆಯಲ್ಲೇ ಪಲ್ಟಿಯಾದ ಘಟನೆ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಳದಂಗಡಿಯಲ್ಲಿ ನಡೆದಿದೆ. ಅಪಘಾತದ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಗುರುವಾಯನಕೆರೆಯಿಂದ ಅಳದಂಗಡಿ ಕಡೆಗೆ ಟೆಂಪೋ ಟ್ರಾವೆಲರ್ ವೇಗವಾಗಿ ಬರುತ್ತಿತ್ತು. ಈ ವೇಳೆ ಏಕಾಏಕಿ ರಸ್ತೆದಾಟಲು ಮಹಿಳೆಯೊಬ್ಬರು ಯತ್ನಿಸಿದ್ದಾರೆ. ಆಗ ಮಹಿಳೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಟೆಂಪೋ ಟ್ರಾವೆಲರ್ ಡ್ರೈವರ್ ಯತ್ನಿಸಿದ್ದಾರೆ. ಆದರೂ ಮಹಿಳೆಗೆ ಟೆಂಪೊ ಟ್ರಾವಲರ್ ತಾಗಿ ಮಹಿಳೆ ಬಿದ್ದಿದ್ದಾರೆ. ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಆದರೆ ಟೆಂಪೊ ಟ್ರಾವಲರ್ ಮಾತ್ರ ಡಿವೈಡರ್ ದಾಟಿ ಮತ್ತೊಂದು ಭಾಗದ ರಸ್ತೆಗೆ ಹೋಗಿ ಬಿದ್ದಿದೆ. ಪರಿಣಾಮ ಟ್ರಾವೆಲರ್ ಚಾಲಕ ಸಹಿತ ಪ್ರಯಾಣಿಕರಿಗೆ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.