240ಕೋಟಿ ಮೊತ್ತದ ಯುಎಇ ಲಾಟರಿ ಗೆದ್ದ ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲ - ಪುತ್ರನಿಗೆ ಅದೃಷ್ಟ ತಂದ ತಾಯಿಯ ಜನ್ಮ ದಿನಾಂಕ
Wednesday, October 29, 2025
ನವದೆಹಲಿ: ಅಬುಧಾಬಿಯಲ್ಲಿ ನೆಲೆಸಿರುವ ಭಾರತ ಮೂಲದ 29ವರ್ಷದ ಯುವಕ ಅನಿಲ್ ಕುಮಾರ್ ಬೊಲ್ಲ 100 ಮಿಲಿಯನ್ ದಿರ್ಹಾಮ್‌ಗಳ (ಸುಮಾರು 240 ಕೋ.ರೂ.) ದೊಡ್ಡಮೊತ್ತದ ಲಾಟರಿ ಗೆದಿದ್ದಾರೆ. ಇವರು ಯುಎಇಯ ಇದುವರೆಗಿನ ಅತ್ಯಂತ ದೊಡ್ಡ ಮೊತ್ತದ ಲಾಟರಿ ಗೆಲ್ಲುವ ಮೂಲಕ ಒಂದೇ ಬಾರಿಗೆ ಶತ ಕೋಟಿಪತಿಗಳ ಸಾಲಿಗೆ ಸೇರಿದ್ದಾರೆ.
ಅನಿಲ್ ಕುಮಾರ್ ಬೊಲ್ಲ ಕಳೆದ ವಾರ ನಡೆದ 23ನೇ ಅದೃಷ್ಟ ಡ್ರಾದಲ್ಲಿ ಎಲ್ಲ 7 ಅಂಕಿಗಳನ್ನು ಸರಿಯಾಗಿ ಊಹಿಸುವ ಮೂಲಕ 88ಲಕ್ಷ ಟಿಕೆಟ್‌ಗಳ ಪೈಕಿ ಅದೃಷ್ಟಶಾಲಿಯಾಗಿ ಹೊರಹೊಮ್ಮಿದ್ದಾರೆ ಎಂದು ದುಬೈನ ಖಲೀಜ್ ಟೈಮ್ಸ್ ವರದಿ ಮಾಡಿದೆ.
ತಾನು ಸ್ವಯಂಚಾಲಿತವಾಗಿ ಅಂಕಿಗಳ ಸಂಯೋಜನೆಯನ್ನು ಸೃಷ್ಟಿಸುವ ಈಜಿ ಪಿಕ್ ಆಯ್ಕೆಯನ್ನು ಬಳಸಿಕೊಂಡು ಬಹುಮಾನಿತ ಟಿಕೆಟ್ ಖರೀದಿಸಿದ್ದೆ. ಆದಾಗ್ಯೂ ತನ್ನ ತಾಯಿಯ ಗೌರವಿಸಲು ಹುಟ್ಟುಹಬ್ಬವನ್ನು ಉದ್ದೇಶಪೂರ್ವಕವಾಗಿ ಅವರ ಜನ್ಮದಿನಾಂಕದ 11ರ ಸಂಖ್ಯೆಯನ್ನು ಕೊನೆಯ ನಂಬರ್ ७१ ಆಯ್ಕೆ ಮಾಡಿಕೊಂಡಿದ್ದೆ ಎಂದು ಅನಿಕ್ ಕುಮಾರ್ ಹೇಳಿದ್ದಾರೆ. ಗೆಲುವಿನ ಬಳಿಕ ಬೊಲ್ಲ ತನ್ನ ಹೆತ್ತವರ ಕನಸುಗಳನ್ನು ನನಸಾಗಿಸಲು, ಅವರನ್ನು ಯುಎಇಗೆ ಕರೆತರಲು ಮತ್ತು ಗೆದ್ದ ಹಣದಲ್ಲಿ ಒಂದು ಭಾಗವನ್ನು ದಾನ ಮಾಡಲು ಯೋಜಿಸಿರುವುದಾಗಿ ತಿಳಿಸಿದರು.
ಯುಎಇಯ ಲಾಟರಿ ಇತಿಹಾಸದಲ್ಲಿಯೇ 100 ಮಿಲಿಯನ್ ದಿರ್ಹಾಮ್‌ಗಳ ಬಹುಮಾನವನ್ನು ಗೆದ್ದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಬೊಲ್ಲ ಪಾತ್ರರಾಗಿದ್ದಾರೆ. ಯುಎಇ ಲಾಟರಿ ತಂಡದಿಂದ ತನ್ನ ಜೀವನವನ್ನೇ ಬದಲಿಸುವ ಕರೆಯನ್ನು ಸ್ವೀಕರಿಸಿದಾಗ ಬೊಲ್ಲ ತನ್ನ ಮನೆಯಲ್ಲಿದ್ದು, ವಿಶ್ರಾಂತಿಯನ್ನು ಪಡೆಯುತ್ತಿದ್ದರು. ಲಾಟರಿ ಆರಂಭಗೊಂಡ ದಿನದಿಂದಲೂ ನಿಷ್ಠೆಯಿಂದ ಬೊಲ್ಲ ಅವರು ಟಿಕೆಟ್ ಖರೀದಿಸುತ್ತಿದ್ದರು. ಈ ಸುದ್ದಿಯನ್ನು ಕೇಳಿದಾಗ ಶಾಕ್ ಆಗಿದ್ದೆ. ಇಷ್ಟೊಂದು ಮೊತ್ತವನ್ನು ಏನು ಮಾಡುವುದೆಂದು ಗೊತ್ತಾಗುತ್ತಿಲ್ಲ ಎಂದಿದ್ದಾರೆ.