ಮಂಗಳೂರಿನಲ್ಲಿ ಗಾಂಜಾ ನಶೆ; ಓರ್ವ ಯುವತಿ 5 ಯುವಕರು ಅರೆಸ್ಟ್!
Friday, October 9, 2020
(ಗಲ್ಫ್ ಕನ್ನಡಿಗ)ಮಂಗಳೂರು: ಮಂಗಳೂರಿನಲ್ಲಿ ಗಾಂಜಾ ನಶೆಯೇರಿಸುತ್ತಿದ್ದ ಯುವತಿ ಸಹಿತ 6 ಮಂದಿಯನ್ನು ಬಂಧಿಸಲಾಗಿದೆ.
(ಗಲ್ಫ್ ಕನ್ನಡಿಗ)ಅಲನ್, ವಿವೇಕ್, ಅಮೃತಾ ವಾಸ್, ಸಚಿನ್, ರೋಹನ್, ನಭಾ ಬಂಧಿತರು. ಇದರಲ್ಲಿ ಅಮೃತಾ ವಾಸ್ ಯುವತಿ.
(ಗಲ್ಫ್ ಕನ್ನಡಿಗ)ದಕ್ಷಿಣ ಕನ್ನಡ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ ಇವರ ನಿರ್ದೇಶನದಂತೆ ಹಾಗೂ ಅಬಕಾರಿ ಅಧೀಕ್ಷಕರು ಮತ್ತು ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದ ಮೇರೆಗೆ ಈ ದಾಳಿ ನಡೆಸಲಾಗಿತ್ತು.
ಇದನ್ನು ಓದಿ; ಮಂಗಳೂರಿನಲ್ಲಿ 22 ವರ್ಷದ ಯುವತಿ ನಾಪತ್ತೆ !
(ಗಲ್ಫ್ ಕನ್ನಡಿಗ) ಮಂಗಳೂರು ದಕ್ಷಿಣ ವಲಯ-1, ಕಚೇರಿಯ ಅಬಕಾರಿ ನಿರೀಕ್ಷಕಿ ಸೀಮಾ, ಅಬಕಾರಿ ಉಪನಿರೀಕ್ಷಕಿ ಪ್ರತಿಭಾ ಜಿ, ಕಮಲ ಹೆಚ್ ಎನ್ ಹಾಗೂ ಸಿಬ್ಬಂದಿಗಳಾದ ಸಂತೋಷ್ ಕುಮಾರ್, ಸುನಿಲ್ ಬೈಂದೂರ್ ಉಮೇಶ್ ಹೆಚ್, ಕುಮಾರ್, ವಿನಿತಾ, ಸಂದೀಪ್ ಕುಮಾರ್ ಮತ್ತು ಮನ್‍ಮೋಹನ್ ರವರ ತಂಡವು ಮಂಗಳೂರು ದಕ್ಷಿಣ ವಲಯ-1ರ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿ
ಆರೋಪಿಗಳನ್ನು ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)ಒಟ್ಟು 1.50 ಗ್ರಾಂ ಎಮ್.ಡಿ.ಎಮ್.ಎ ಡ್ರಗ್ಸ್, 100 ಗ್ರಾಂ ಗಾಂಜಾ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
(ಗಲ್ಫ್ ಕನ್ನಡಿಗ)