ಅಕ್ಟೋಬರ್ 4 ಕ್ಕೆ ನಾಪತ್ತೆಯಾದ 22 ವರ್ಷದ ಯುವಕ ! - ಎಲ್ಲಿ ಹೋದ ಹುಸೈನ್?
Friday, October 9, 2020
(ಗಲ್ಫ್ ಕನ್ನಡಿಗ)ಮಂಗಳೂರು : ಅಕ್ಟೋಬರ್ 4 ರಂದು 22 ವರ್ಷದ ಯುವಕನೊಬ್ಬ ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.
(ಗಲ್ಫ್ ಕನ್ನಡಿಗ) ಹುಸೈನ್ (22) ಎಂಬ ಯುವಕ, ಅಕ್ಟೋಬರ್ 4 ರಂದು ಮನೆಯಿಂದ ಹೋದವನು ವಾಪಸ್ಸು ಬಾರದೆ ಕಾಣೆಯಾಗಿದ್ದಾನೆ.ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ; *ಮಂಗಳೂರಿನಲ್ಲಿ 22 ವರ್ಷದ ಯುವತಿ ನಾಪತ್ತೆ !
(ಗಲ್ಫ್ ಕನ್ನಡಿಗ) ಕಾಣೆಯಾದ ಯುವಕನ ಚಹರೆ ಇಂತಿವೆ: ಹೆಸರು- ಹುಸೈನ್, ಪ್ರಾಯ-22 ವರ್ಷ, ಎತ್ತರ-5 ಅಡಿ 4 ಇಂಚು, ಎಣ್ಣೆಗಪ್ಪು ಸಪೂರ ಶರೀರ, ಕೋಲು ಮುಖ ಹೊಂದಿರುತ್ತಾನೆ. ಧರಿಸಿದ ಬಟ್ಟೆ – ನೀಲಿ ಬಣ್ಣದ ಟೀ- ಶರ್ಟ್‍ಬಿಳಿ ಮತ್ತು ಬಿಳಿ ಬಣ್ಣದ ಪ್ಯಾಂಟ್, ಮಾತನಾಡುವ ಭಾಷೆ- ಕನ್ನಡ, ಇಂಗ್ಲೀಷ್, ಬ್ಯಾರಿ.
(ಗಲ್ಫ್ ಕನ್ನಡಿಗ) ಕಾಣೆಯಾದ ಯುವಕನ ಬಗ್ಗೆ ಮಾಹಿತಿ ದೊರಕಿದಲ್ಲಿ ಠಾಣಾಧಿಕಾರಿ, ಮುಲ್ಕಿ ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆ: 0824-2220533, 9480805332, 9480805359 ಸಂಪರ್ಕಿಸಲು ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.
(ಗಲ್ಫ್ ಕನ್ನಡಿಗ)