ಸುದ್ದಿ_ಮಾಡುವವರೇ ಸುದ್ದಿಯಾದಾಗ!

 


ಬರಹ: ಎಂಜಿಹೆಗಡೆ

 #ಪೀಠಿಕೆಹಳೆಯನೆನಪು

ನನಗೂ ಈ ಮಾಧ್ಯಮಕ್ಕೂ ೪೦ ವರ್ಷದ ಸಂಪರ್ಕ. ನಾನು ಉಡುಪಿಯಲ್ಲಿ ವಿಧ್ಯಾರ್ಥಿ ಸಂಘದ ಪದಾಧಿಕಾರಿ ಆದಾಗಿನಿಂದ ಪದೇ ಪದೇ ಮಾಧ್ಯಮದ ಸಂಪರ್ಕದಲ್ಲೇ ಇದ್ದೇನೆ.
ಉತ್ಥಾನ ಮಾಸ ಪತ್ರಿಕೆ ಒಂದು ವರ್ಷ, ನನ್ನದೇ ವಾರ ಪತ್ರಿಕೆ ಕಡಲ ಕೇಸರಿ ಒಂದು ವರ್ಷ ಮತ್ತು ಮಂಗಳೂರಿನಲ್ಲಿ ಮೊದಲ ಟಿ ವಿ ಚಾನಲ್  ದಿ.ರೋಹಿತ್ ಶುರು ಮಾಡಿದಾಗ ಅವರ ಜೊತೆ ಒಂದಿಷ್ಟು ಒಳಮುಖ ಅರ್ಥವಾಗಿತ್ತು.

ನಾನು ಮೊದಲ ಪ್ರೇಸ್ ಮೀಟ್ ದೊಡ್ಡ ಮಟ್ಟದಲಿ ಕುಳಿತದ್ದು ಬೆಂಗಳೂರಿನ ಹೋಟೆಲ ಒಂದರಲ್ಲಿ. ಆಗ ನಾನು ಮಂಗಳೂರು ಲಾ ಕಾಲೇಜು ವಿಧ್ಯಾರ್ಥಿ ಸಂಘದ ಕಾರ್ಯದರ್ಶಿ .
ಮಂಗಳೂರು ವಿ ವಿ ಯ ಆಗಿನ ಭ್ರಷ್ಟಾಚಾರದ ವಿರುದ್ಧ ದೊಡ್ಡ ಚಳುವಳಿಯಾಗಿತ್ತು. ಈಗಿನ ಕಾಂಗ್ರೆಸ್ ನಾಯಕ ಅಶ್ವಿನಿ ಕುಮಾರ ರೈ ವಿಧ್ಯಾರ್ಥಿ ಪರಿಷತ್ ನ ವಿಶ್ವೇಶ್ವರ ಭಟ್ಟ , ನಾನು ಸೇರಿದಂತೆ ಎಲ್ಲ ಸಂಘಟನೆಗಳೂ ಒಟ್ಟಾಗಿ ಹೋರಾಟ ಮಾಡಿದ ದಿನ. ಬೆಂಗಳೂರು ರಾಜ್ಯಪಾಲರಿಗೆ ಮನವಿ ನೀಡಿ ನಂತರ ಈ ಪತ್ರಿಕಾಗೋಷ್ಠಿ. ಈಗಿನ ಸ್ಪೀಕರ್ ಆಗ ಎಬಿವಿಪಿ ನಾಯಕ. ಅವರೊಂದಿಗೆ.

ನಾನು ಒಬ್ಬಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿದ್ದು 1988 ರ ಅಂದಾಜು. ಮಂಗಳೂರಿನ ಮೋಹಿನಿ ವಿಲಾಸ್ ಹೋಟೆಲ್ ನಲ್ಲಿ.

#ಆಗಿನಮಾಧ್ಯಮಮತ್ತು_ಮಾಧ್ಯಮ #ಮಂದಿ

ಆಗ ನನ್ನಲ್ಲಿ   ಬರೀ ಉತ್ಸಾಹ, ಹೋರಾಟದ ಕಿಚ್ಚು ಬಿಟ್ಟರೆ ಬೇರೆ ಗೊತ್ತಿಲ್ಲ.
ಆ ಮೊದಲ ಪತ್ರಿಕಾಗೋಷ್ಠಿ ಯಿಂದ, ನಂತರದ ಕೆಲವು ಪತ್ರಿಕಾಗೋಷ್ಟಿಗಳಿಗೂ ಇವರಿದ್ದುದು.
ಮಾನ್ಯ ದಿ. ನರಸಿಂಹ ರಾವ್ ಹಿಂದೂ
ಪಿಟಿಐ ರಾಮಚಂದ್ರ ರಾವ್   ಟೇಮ್ಸ್ ನ  ಶ್ರೀ ಗೋಪಾಲಕೃಷ್ಣ
ಉದಯವಾಣಿಯ ಹಿರಿಯ  ವರದಿಗಾರ ಶ್ರೀ ಮಯ್ಯ, ಯುವ ವರದಿಗಾರ ಮನೋಹರ ಪ್ರಸಾದ,
ಮುಂಗಾರುವಿನ ಯುವ ವರದಿಗಾರ ಚಿದಂಬರ ಬೈಕಂಪಾಡಿ. ಮತ್ತೆ ಯಾರಿದ್ದರು ಅನ್ನುವುದು ನೆನಪಲ್ಲಿ ಇಲ್ಲ. ಮತ್ತೆ ನನ್ನ  ವಯಸ್ಸಿನವರು ಕಿರಿಯರು ಅನೇಕ ಮಿತ್ರ ಪಡೆ ಇದೆ.
ಆಗ ನಾನು ಹಿರಿಯ ಪತ್ರಕರ್ತರೆದುರು ಬಚ್ಚಾ.
ಆದರೂ ಒಂದು ಮಟ್ಟದಲ್ಲಿ ಪಾಸ್ ಮಾಡಿದ್ದರು. ಅವರು ಸರಳ ಉಡುಪುಗಳು,
ವಿನಯ, ನಾವು ತಪ್ಪಿದರೆ ಪತ್ರಿಕಾ ಗೋಷ್ಠಿ ನಂತರ ಕರೆದು ತಿದ್ದುವ ಪರಿ ಈಗಲೂ ನೆನಪಿದೆ. ಆಗ ಸುದ್ದಿಯಾಗುವುದು ಮತ್ತು ಅದು ಪತ್ರಿಕೆಯಲ್ಲಿ ಬರುವುದು ಒಂದು ಸಾಹಸವೇ ಆಗಿತ್ತು. ಗೋಷ್ಠಿಯಲ್ಲಿ
ಮಾಮೂಲಿ ಒಂದು ತಿಂಡಿ ಚಹಾ. ಕೆಲವೊಮ್ಮೆ ಬೇರೆ ಕಡೆ ಮಾಡಿದಾಗ ಅದೂ ಇಲ್ಲ. ಇವರೇಲ್ಲರ ಮತ್ತು ನಂತರ ಬಂದವರು ಈಗಿನವರ ತನಕ ನಾನು ಸಂಪರ್ಕದಲ್ಲಿಟ್ಟುಕೊಂಡಿದ್ದೇನೆ.

#ಆಗ
ಪತ್ರಿಕೆಗಳೂ ಕಡಿಮೆ. ಟಿ ವಿ ಯಂತೂ ಇಲ್ಲ. ಈಗ ಎಲ್ಲವೂ ಲೆಕ್ಕ ಮೀರಿದೆ. ಪತ್ರಿಕಾ ಗೋಷ್ಠಿ ಮಾಡಿದರೆ ಮಂಗಳೂರಿನಲ್ಲಿ ಕನಿಷ್ಠ ೫೦ ರಿಂದ  ೬೦ ಜನ ಬರುತ್ತಾರೆ. ಎಲ್ಲ ಕ್ಷೇತ್ರದಲ್ಲಿ ಬದಲಾವಣೆ ಆದಂತೆ ಮಾಧ್ಯಮವೂ ಬದಲಾಗುತ್ತ ಬಂತು.  ಯಾವಾಗ ಸುದ್ದಿಯ ಜೊತೆಗಾರನಾಗಿ ಜಾಹೀರಾತು ಆರ್ಭಟ ಜೋರಾಯಿತೋ ಅಲ್ಲಿಂದ ಮಾಧ್ಯಮ ವ್ಯವಸ್ಥೆಯ ವರ್ತನೆ ಬೇರೇಯೇ ಆದದ್ದು.

ತದನಂತರ ಹುಬ್ಬಳ್ಳಿಯಿಂದ ಶುರು ಮಾಡಿ ಹೈದರಾಬಾದ್  ಕಲ್ಕತ್ತಾ ದೆಹಲಿ ಬೆಂಗಳೂರಿನಂತಹ ನಗರಗಳಲ್ಲಿ  ದೇಶದ ಮೋದಲ ಫ್ಯಾಶನ್ ಕಾಲೇಜು ಮಾಡಿದ ಬಗ್ಗೆ ಪತ್ರಿಕಾ ಗೋಷ್ಠಿ ಮಾಡಿದಾಗಿನ ಅನುಭವವೇ ಬೇರೆ. ಅದರ ಕಥೆ ಉದ್ದ ಕೆಲವು ನಿಷಿದ್ಧವೂ ಇದೆ. ಸರಳವಾಗಿ,
ಜಾಹೀರಾತು ಮೊದಲು ಸುದ್ದಿ ನಂತರ.

#ಟಿವಿಆರ್ಭಟ

ಈ ನಡುವೆ ಹುಟ್ಟಿಕೊಂಡ ಟಿ ವಿ ಗಳ ಸುದ್ದಿ ವಾಹಿನಿಗಳು. ಅಬ್ಬಾ ಎಲ್ಲಿಂದ ಎಲ್ಲಿಗೋ ಹೋಗಿ ಬಿಟ್ಟಿವೆ. ಸೈದ್ಧಾಂತಿಕ  ರಾಜಕೀಯ ಮತೀಯ ನಾಯಕರು ಇಂತಹ ಟಿ ವಿ ಗಳ ಪ್ರವರ್ತಕರಾದರು. ಮಾಧ್ಯಮದ ಯಾವ ನೀತಿ ನಿಯಮ ಸಂಯಮ ಯಾವುದೂ ಇಲ್ಲ. ಅವರೊಳಗಿನ ಪೈಪೋಟಿಯಲ್ಲಿ ಗೆದ್ದು ಬದುಕಬೇಕೆಂಬ ಧಾವಂತ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂಬ ಪಾವಿತ್ರ್ಯತೆಯನ್ನು ಅಶುದ್ದೀಕರಿಸುತ್ತಿರುವ ವಿಷಾದದ ದಿನಗಳು.
ಜನರ ಧ್ವನಿಯಾಗಿ ಸರ್ಕಾರವನ್ನು  ಎಚ್ಚರಿಸಬೇಕಾದ, ಪ್ರಜಾಪ್ರಭುತ್ವದ ಕಾವಲುಗಾರನಾಗ ಬೇಕಾದ ವ್ಯವಸ್ಥೆ ಹೀಗಾಗತ್ತಿದೆಯಲ್ಲ ಎಂಬ ನೋವು. ನಿರೂಪಕ ಸಂಪಾದಕ ವರದಿಗಾರ ಸ್ಥಾನಗಳ ಗೌರವವೇ ನೀರುಪಾಲು.  ದಿ ಮಯ್ಯ ,ಗೋಪಾಲ ಕೃಷ್ಣ  ಅಂತವರ ಬಳಿ ಮಾತನಾಡಲು ಭಯವಾಗುತ್ತಿತ್ತು. ಅವರ ಮಾಧ್ಯಮ ವ್ಯಕ್ತಿತ್ವಕ್ಕೆ ಕಾಲು ಹಿಡಿದು ನಮಸ್ಕರಿಸಲೂ ಮನಸ್ಸಾಗುತ್ತಿತ್ತು.

#ಈಗ,
ತಣ್ಣಗೆ ಸುದ್ದಿ ಹೇಳಬೇಕಾದವರು, ಆಕ್ರೋಶ ಭರಿತವಾಗಿ ತಮ್ಮ ಭಾವನೆಗಳನ್ನು ಹೇರುತ್ತಾರೆ. ವಿಶ್ಲೇಷಣೆಯ ಹೆಸರಲ್ಲಿ ತಮಗೆ ಬೇಕಾದವರಿಗೆ ಬೇಕಾದಂತೆ ಅಥವಾ ಹೆಚ್ಚು ಜಾಹೀರಾತಿಗಾಗಿ ಇಲ್ಲದ ಸಲ್ಲದ ಶಬ್ಧ /ವಾಕ್ಯ  ಪ್ರಯೋಗ.
#TRP  ಗಾಗಿ ಮೋಸ ವಂಚನೆ ಪ್ರಕರಣ ದಾಖಲಾಗುವಷ್ಟರ ಮಟ್ಟಿಗಿನ ಭಂಡತನ, ಸುದ್ದಿ ಇಲ್ಲದಿದ್ದರೆ ಸೃಷ್ಟಿ ಮಾಡುವ ಪರಿ ಅಬ್ಬಾ.

ಕೆಲವು ಮನೆಗಳಲ್ಲಿ ಟಿವಿ ಜೊತೆ ಒಂದು ಬಾಕ್ಸ್ ಇಟ್ಟು ಯಾರು ಯಾವ ಟಿ ವಿ ನೋಡುತ್ತಾರೆ ಅನ್ನುವುದನ್ನು ಲೆಕ್ಕಿಸಿವುದು ಟಿ ಆರ್ ಪಿ. ಅದರ  ಆಧಾರದ ಮೇಲೆ ಜಾಹೀರಾತು ಮತ್ತು ಹಣ ಟಿ ವಿ ಗಳಿಗೆ ಹರಿದು ಬರುತ್ತದೆ. ಇಂತಹ ಪೆಟ್ಟಿಗೆ ಇಡೋದು ಕೇವಲ  ೩೦ ಸಾವಿರ ಅಂತಾ ಮಾಹಿತಿ. ಇದರಲ್ಲಿ ಎನು ಲೆಕ್ಕ ಮಾಡುತ್ತಾರೋ ಗೊತ್ತಿಲ್ಲ. ಇಲ್ಲಿಂದಲೇ ಎಲ್ಲವೂ ಏಕ್ಕುಟ್ಟಿ ಹೋದದ್ದು.

#ಸಧ್ಯ ಅದೇ ರಿಪಬ್ಲಿಕ್ ಟಿ ವಿ ಸೇರಿದಂತೆ ಕೆಲವು ಚಾನೆಲ್ ಗಳು ಇಲ್ಲಿ ಹಣ ನೀಡಿ ವಂಚಿಸಿದೆ ಅನ್ನುವುದು.
ಬೇರೆಯವರ ಜನಸಾಮಾನ್ಯರ ಇಂತಹ ಪ್ರಕರಣ ಆದರೆ ಈಡೀ ದಿನ ಹಾಕಿಕೊಂಡು ರುಬ್ಬುತ್ತಾರೆ. ಬೇರೆ ಪ್ರಕರಣಗಳಲ್ಲಿ ವಿವರ ಕೋಡಿ... ಹೇಳಿ... ಹಾ ಹೂ ಅಂತಾ  ಮನೆಗೆ ನುಗ್ಗುವ , ದಾರಿಯಲ್ಲಿ ಬೆನ್ನಟ್ಟುವ, ಕಾರಿಗೆ  ಅಡ್ದವಾಗುವ ಈ ವ್ಯವಸ್ಥೆ ಈಗ ಜಾಣ ಮೌನ ಕಿವುಡು. ಒಬ್ಬ ರಾಜಕಾರಣಿ , ಧಾರ್ಮಿಕ ಮುಂದಾಳು ಸಿನಿಮ‍ಾ ಕಲಾವಿದ ತಪ್ಪು ಮಾಡಿದರೆ ಈಗ ಎನ ಹೇಳ್ತಿರಾ...ಧಮ್ ಇಲ್ಲವಾ.. ಬರ್ರೀ ಎಂದು ಕಿರುಚಾಡುವ ಜನ ಈಗ ಅವರ ಟಿ ವಿ ಗಳ ಆಕ್ರಮ ಸುದ್ದಿ ನಾವು ಮೂತ್ರ ಮಾಡಿ ಬರುವಾಗ ಬಂದು ಹೋಗಿರುತ್ತದೆ.

#ಅಂದಹಾಗೆಇಲ್ಲೂಒಳ್ಳೆಯವರಿದ್ದಾರೆ.
ಎಲ್ಲ ವ್ಯವಸ್ಥೆಯಂತೆ ಇಲ್ಲೂ ಒಳ್ಳೆಯವರು ಇದ್ದಾರೆ. ಈ ವ್ಯವಸ್ಥೆಗೆ ರೋಸಿ ಹೋದವರು ಇದ್ದಾರೆ. ಇದಲ್ಲ ಮಾಧ್ಯಮ ..ನಾವು ಸರಿದಾರಿಯಲ್ಲಿ ಸಾಧಿಸಬೇಕು ಅನ್ನುವ ಒಂದು ಪಡೆಯೇ ಇದೆ. ಆದರೆ ಆವರ ಬಳಿ ಆರ್ಥಿಕ ಶಕ್ತಿಯಿಲ್ಲ. ಕೊರೊನ ದಿಂದ ಅನೇಕ ಪತ್ರಿಕೆ ಟಿವಿ ಗಳಿಂದ ಕೆಲಸ ಕಳಕೊಂಡು ಕಂಗಾಲಾಗಿ ಕುಳಿತವರು ಇದ್ದಾರೆ.

#ಮಾಧ್ಯಮರಾಜಕೀಯಮತೀಯಬಂಡವಾಳಶಾಹಿಗಳಿಂದ_ಮುಕ್ತವಾಗಬೇಕು.
#ಹಾಗಾದಾಗಪ್ರಜಾಪ್ರಭುತ್ವದಧೀ_ಶಕ್ತಿ
#ಮೊಳಗುತ್ತದೆ.#ಸತ್ತು_ಹೋಗುತ್ತಿರುವ
#ಸತ್ಯಶಕ್ತಿಗೆದ್ದು_ಬೀಗುತ್ತದೆ.


ಇದು ಆಶಾವಾದ ಬದಲ‍ಾವಣೆ ಜಗದ ನಿಯಮ. ಇದೂ ಬದಲಾದೀತು ಅನ್ನುವ ಹಂಬಲದೊಂದಿಗೆ.