ಸುಳ್ಳು ಕೇಸ್ ದಾಖಲಿಸಿದ ವಕೀಲನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ನ್ಯಾಯಾಲಯ
Thursday, August 21, 2025
ಲಖನೌ: ದಲಿತ ಮಹಿಳೆಯ ಗುರುತು ದುರುಪಯೋಗಪಡಿಸಿ ಎದುರಾಳಿಗಳ ವಿರುದ್ಧ ನಕಲಿ ಪ್ರಕರಣ ದಾಖಲಿಸಿದ ವಕೀಲನಿಗೆ ಲಖನೌನ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 5.10 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ವಿಶೇಷ ನ್ಯಾಯಾಧೀಶ (ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ) ವಿವೇಕಾನಂದ ಶರಣ್ ತ್ರಿಪಾಠಿಯವರು ವಕೀಲನಾದ ಪರಮಾನಂದ ಗುಪ್ತಾ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ರಾವತ್ ಎಂಬಾತನೊಂದಿಗೆ ಶಾಮೀಲಾಗಿದ್ದ ಪರಮಾನಂದ ಗುಪ್ತಾ ತನ್ನ ಎದುರಾಳಿ ಪಕ್ಷದ ವಿರುದ್ಧ 18 ಪ್ರಕರಣಗಳನ್ನು ಮತ್ತು ರಾವತ್ ಮೂಲಕ 11 ಪ್ರಕರಣಗಳನ್ನು ದಾಖಲಿಸಿದ್ದ. ಇವುಗಳಲ್ಲಿ ಕೆಲವು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಇದ್ದರೆ, ಕೆಲವು ಪ್ರಕರಣಗಳು ಅತ್ಯಾಚಾರ ಮತ್ತು ಕಿರುಕುಳ ಆರೋಪ ಹೊರಿಸಿಯೂ ದಾಖಲಿಸಿದ್ದ. ಅಲಹಾಬಾದ್ ಹೈಕೋರ್ಟ್ ನಲ್ಲಿ ಅರ್ಜಿಗಳು ವಿಚಾರಣೆಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ 2025ರ ಮಾರ್ಚ್ 5ರಂದು ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು.