ವಾಯುಯಾನ ಕ್ಷೇತ್ರದಲ್ಲಿ ಏರ್ ಇಂಡಿಯಾ ನೂತನ ದಾಖಲೆ
Saturday, February 11, 2023
ಮುಂಬೈ : ಟಾಟಾ ಸನ್ಸ್ ಒಡೆತನದ ಏರ್ ಇಂಡಿಯಾ
500 ವಿಮಾನಗಳನ್ನು ಆರ್ಡರ್ ಮಾಡುವ ಮೂಲಕ
ವಾಯುಯಾನ ಕ್ಷೇತ್ರದಲ್ಲಿ ದಾಖಲೆ ಬರೆದಿದೆ. ಇದು
ಆಧುನಿಕ ವಿಮಾನಯಾನ ಕ್ಷೇತ್ರದಲ್ಲಿ ಏರ್‌ಲೈನ್ಸ್
ಕಂಪನಿಯೊಂದು ಮಾಡಿದ ಅತಿದೊಡ್ಡ ಆರ್ಡಗಳಲ್ಲಿ
ಒಂದಾಗಿದೆ.
430 ಸಣ್ಣ ಮತ್ತು 30 ದೊಡ್ಡ ಗಾತ್ರದ ವಿಮಾನಗಳನ್ನು ಖರೀದಿಸಲು ಏರ್ ಇಂಡಿಯಾ ಮುಂದಾಗಿದ್ದು, ಮುಂದಿನ ಏಳರಿಂದ ಎಂಟು ವರ್ಷಗಳಲ್ಲಿ
ವಿಮಾನಗಳು ಏರ್ ಇಂಡಿಯಾವನ್ನು ಸೇರಲಿವೆ.
ಈ ಹಿಂದೆ ಅಮೆರಿಕನ್ ಏರ್‌ಲೈನ್ಸ್ 460 ವಿಮಾನಗಳನ್ನು ಆರ್ಡರ್ ಮಾಡುವ ಮೂಲಕ ದಾಖಲೆ ಮಾಡಿತ್ತು. 2019 ರಲ್ಲಿ ಇಂಡಿಗೋ (Indigo) 300 ವಿಮಾನ ಖರೀದಿಗೆ ಆರ್ಡರ್ ಮಾಡಿತ್ತು.