
UDUPI- ಮದುವೆಗೆ ಅಂತ ತೆಗೆದಿಟ್ಟ ಹತ್ತು ಲಕ್ಷ ಹಣವನ್ನು ಬಡವರಿಗೆ ದಾನ ಮಾಡಿ ಮಾದರಿಯಾದ SUKESH SHETTY
ಉಡುಪಿ: ಸರಳವಾಗಿ ಮದುವೆಯಾದ ಯುವಕನೊಬ್ಬ, ತನ್ನ ಮದುವೆಗೆ ಅಂತ ತೆಗೆದಿಟ್ಟ ಹತ್ತು ಲಕ್ಷ ಹಣವನ್ನು ಬಡವರಿಗೆ ದಾನ ಮಾಡಿ ಮಾದರಿಯಾಗಿದ್ದಾನೆ.
ಅದ್ದೂರಿತನದ ಬದಲಿಗೆ ಮಾನವೀಯತೆ ಮೆರೆದದ್ದು ಉಡುಪಿ ಜಿಲ್ಲೆಯ ಕಾರ್ಕಳದ ಸುಕೇಶ್ ಶೆಟ್ಟಿ. ಮುಂಬೈನಲ್ಲಿ ಉದ್ಯಮಿಯಾಗಿರುವ ಸುಕೇಶ್ ಶೆಟ್ಟಿ, ತನ್ನ ಮದುವೆಗೆ ಅಂತ ಹತ್ತು ಲಕ್ಷ ರೂಗಳನ್ನು ತೆಗೆದಿಟ್ಟಿದ್ದರು. ಆದ್ರೆ ಬಡವರ ಬಗ್ಗೆ ಕಾಳಜಿ ಹೊಂದಿದ್ದ ಸುಕೇಶ್ ಶೆಟ್ಟಿ ಅದ್ದೂರಿ ಮದುವೆಯ ಬದಲಾಗಿ ಕಾರ್ಕಳದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾದರು. ಹೀಗಾಗಿ ಸರಳ ವಿವಾಹದಿಂದಾಗಿ ಉಳಿದ 10 ಲಕ್ಷ ಹಣವನ್ನು ಬೇರೆ ಸಮಸ್ಯೆಯಿಂದ ಬಳಲುತ್ತಿರುವ ಬಡವರಿಗೆ ನೆರವು ನೀಡಿದ್ದಾರೆ. ಆರೋಗ್ಯ ಸಮಸ್ಯೆ, ವಿದ್ಯಾಭ್ಯಾಸಕ್ಕೆ, ಮನೆ ರಿಪೇರಿಗೆ, ದನ ಖರೀದಿಗೆ ಹೀಗೆ ಹಲವು ಮಂದಿ ಬಡವರಿಗೆ ಧನ ಸಹಾಯ ಮಾಡಿದ್ದಾರೆ. ಸುಕೇಶ್ ಶೆಟ್ಟಿ ಅವರ ಒಳ್ಳೆಯ ಕೆಲಸಕ್ಕೆ ವಜ್ರದೇಹಿ ಸ್ವಾಮಿಜೀ ಸಹಿತ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..