
ಅಶ್ಲೀಲ ಪೊಟೊ ತಯಾರಿಸಿ ಬ್ಲ್ಯಾಕ್ ಮೇಲ್: ಓರ್ವ ಸೆರೆ
ಅಧ್ಯಾಪಕರೊಬ್ಬರ ಪೊಟೊವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವೆನೆಂದು ಬೆದರಿಸುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಜಾಲದ ವಿಶ್ವನಾಥ್ ಬಂಧಿತ ಆರೋಪಿ. ಈತ ಮೂಲತ ಅಸ್ಸಾಂನವನಾಗಿದ್ದು ಬೆಂಗಲುರಿನ ಚಿಕ್ಕಜಾಲದಲ್ಲಿ ಕೋಳಿಫಾರ್ಮ್ ಮಾಡುತ್ತಿದ್ದಾನೆ. ಈತ ಯಲ್ಲಪ್ಪ ಎಂಬ ಶಿಕ್ಷಕರ ಪೊಟೊವನ್ನು ವಾಟ್ಸಪ್ ನಿಂದ ಸಂಗ್ರಹಿಸಿ ಅದನ್ನು ಅಶ್ಲೀಲವಾಗಿ ರೂಪಿಸಿದ್ದ. ಅದರ ಬಳಿಕ ಯಲ್ಲಪ್ಪ ಅವರಿಗೆ ಬೆದರಿಕೆ ಹಾಕಲು ಆರಂಭಿಸಿ 70 ಸಾವಿರ ನೀಡಿದ್ದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಅಪ್ಲೋಡ್ ಮಾಡುವುದಾಗಿ ತಿಳಿಸಿದ್ದ. ಯಲ್ಲಪ್ಪ ಅವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಇವನನ್ನು ಬಂಧಿಸಿದ್ದಾರೆ . ಆರೋಪಿಯ ಮೊಬೈಲ್ ವಶಕ್ಕೆ ಪಡೆಯಲಾಗಿದ್ದು ಇದರಲ್ಲಿ ಇನ್ನು ಹಲವರ ಪೊಟೋಗಳನ್ನು ಅಶ್ಲೀಲವಾಗಿ ರೂಪಿಸಿರುವುದು ಬೆಳಕಿಗೆ ಬಂದಿದೆ