
ಪತ್ನಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಪತಿ: ಈತ ಈ ಹಲ್ಕಾ ಕೆಲಸ ಮಾಡಿದ್ದು ಯಾಕೆ ಗೊತ್ತಾ?
(ಗಲ್ಪ್ ಕನ್ನಡಿಗ)ಪತ್ನಿಯರಿಗೆ ಹಿಂಸೆ ನೀಡುವ ಹಲವು ಸುದ್ದಿಗಳು ಕೇಳಿ ಬರುತ್ತಲೆ ಇರುತ್ತದೆ. ಆದರೆ ಬೆಂಗಳೂರಿನಲ್ಲಿ ವಿಚಿತ್ರ ರೀತಿಯಲ್ಲಿ ಪತ್ನಿಗೆ ಹಿಂಸೆ ನೀಡಿದ ಪತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಈತ ತನ್ನ ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ವಿಕೃತಿ ಮೆರೆದಿದ್ದಾನೆ. ಗಂಡನ ವಿಕೃತ ಹಿಂಸೆಯಿಂದ ಮಹಿಳೆ ಆಸ್ಪತ್ರೆ ಸೇರಿದ್ದು ಚಿಕಿತ್ಸೆ ಪಡೆಯುತ್ತಿದ್ದಾಳೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ಬೆಂಗಳೂರಿನ ಟಿ ಸಿ ಪಾಳ್ಯದ ಸೂರಜ್ ಸಿಂಗ್ ಈ ಕೃತ್ಯ ಮಡಿದವನು. ಈತ ಬೆಂಗಳೂರಿನಲ್ಲಿ ಬೀಡಾ ಅಂಗಡಿಯನ್ನಿಟ್ಟುಕೊಂಡಿದ್ದಾನೆ. ಒಂದು ವರ್ಷದ ಹಿಂದೆ ವಿವಾಹವಾಗಿದ್ದ ಈತ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಈತನ ಮದುವೆಯನ್ನು 15 ಲಕ್ಷ ರೂ ವೆಚ್ಚ ಮಾಡಿ ಮಾಡಲಾಗಿತ್ತು. ಆದರೂ ಈತ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ . ಪತ್ನಿಯು ಒಂದೆರಡು ಬಾರಿ ಹಣ ತಂದುಕೊಟ್ಟಿದ್ದಳು. ಆದರೆ ಕೆ ಮತ್ತೆ ಹಣ ತರದಿರುವುದಕ್ಕೆ ಸಿಟ್ಟಾದ ಆತ ಆಕೆಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆ ಸಂಬಂಧ ಆಕೆಯ ಪತಿ , ಆತನ ತಂದೆ ಲೌನೇಶ್ , ತಾಯಿ ಮತ್ತು ಮತ್ತೊಬ್ಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
(ಗಲ್ಪ್ ಕನ್ನಡಿಗ)