ಕುಕ್ಕೆ: ಆಶ್ಲೇಷ ಬಲಿ‌ ಸೇವೆಗಾಗಿ ರಾತ್ರಿಯೇ ಸರತಿ ಸಾಲು
(ಗಲ್ಪ್ ಕನ್ನಡಿಗ)ಸುಬ್ರಹ್ಮಣ್ಯ: ಕುಕ್ಕೆ‌ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕೆಲ ದಿನಗಳಿಂದ ಹೆಚ್ಚಿನ ಭಕ್ತರು ಬೇಟಿ ನೀಡುತ್ತಿದ್ದು, ಸೋಮವಾರ(ಅ.12) ಆಶ್ಲೇಷ ನಕ್ಷತ್ರ ವಿಶೇಷ ದಿನವಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಸೋಮವಾರದ ಸೇವೆ ನೆರವೇರಿಸಲು ಭಾನುವಾರ ರಾತ್ರಿಯೇ ಸರತಿ ಸಾಲಿನಲ್ಲಿ ನಿಂತ ದೃಶ್ಯ‌‌ ಕಂಡುಬಂದಿದೆ. ಕುಕ್ಕೆಯಲ್ಲಿ ಸೇವೆಗಳಿಗೆ ರಶೀದಿಯನ್ನು ಬೆಳಿಗ್ಗೆ 6 ಗಂಟೆಗೆ ನೀಡಲು ಪ್ರಾರಂಭಿಸುತ್ತಾರೆ. ಆದರೆ ಇತ್ತ ಭಕ್ತರು ರಶೀದಿ ವಂಚಿತವಾಗುವ ಅಥವಾ ತಡವಾಗುವ ಆತಂಕದಿಂದ ಭಾನುವಾರ ರಾತ್ರಿಯೇ ದೇವಲದ ಕಛೇರಿ ಬಳಿ ಸರತಿ‌ ಸಾಲಿನಲ್ಲಿ ನಿಂತಿದ್ದಾರೆ. ವಿಶೇಷವಾಗಿ ಆಶ್ಲೇಷ ನಕ್ಷತ್ರ ದಿನದಂದು ಹೆಚ್ಚಿನ ಭಕ್ತರು ಕ್ಷೇತ್ರಕ್ಕೆ ಬೇಟಿ ನೀಡಿ ಆಶ್ಲೇಷ ಬಲಿ ಸೇವೆ ಮಾಡಿಸುತ್ತಾರೆ. ಕೋವಿಡ್ ಹಿನ್ನಲೆಯಲ್ಲಿ ಸೇವೆಗಳಿಗೆ ಮಿತಿ ಇರುವುದರಿಂದ ಭಕ್ತರು ರಾತ್ರಿಯೇ ಸರತಿ‌ ಸಾಲಿನಲ್ಲಿ ನಿಂತಿದ್ದಾರೆ ಎನ್ನಲಾಗಿದೆ.


(ಗಲ್ಪ್ ಕನ್ನಡಿಗ)