UDUPI-ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ; 3 ಮಂದಿ ಸಾವು
Monday, March 21, 2022
ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮೂವರು ಸಾವನ್ಪಿದ ಘಟನೆ ಉಡುಪಿ ಜಿಲ್ಲೆಯ ಕಾಪುವಿನ ಮುಲ್ಲಾರುವಿನಲ್ಲಿ ನಡೆದಿದೆ.
ಇಲ್ಲಿನ ಫಕ್ಕಿರನಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗುಜರಿ ಅಂಗಡಿಯಲ್ಲಿ ಮಧ್ಯಾಹ್ನದ ವೇಳೆ, ಸಿಬ್ಬಂದಿ ಗ್ಯಾಸ್ ಸಿಲಿಂಡರ್‌ನ್ನು ಕಟ್ಟಿಂಗ್ ಮಾಡುತ್ತಿದ್ದಾಗ ಗ್ಯಾಸ್ ಸಿಲಿಂಡರ್‌ನಲ್ಲಿದ್ದ ಗ್ಯಾಸ್‌ಗೆ ಬೆಂಕಿ ತಗುಲಿ ಗ್ಯಾಸ್ ಸ್ಪೋಟಗೊಂಡಿದೆ. ಪರಿಣಾಮ ರಜಾಕ್ ಹಾಗೂ ರಜಾಬ್ ಸ್ಥಳದಲ್ಲೇ ಸಜೀವ ದಹನವಾಗಿದ್ದು ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದರು, ನಾಲ್ವರಲ್ಲಿ ನಿಯಾಜ್ ಎಂಬಾತ ಚಿಕಿತ್ಸೆ ಫಲಕಾರಿ ಆಗದೇ ಸಾವನಪ್ಪಿದ್ದಾನೆ.
ಇನ್ನೂ ಬೆಂಕಿ ತಗುಲಿದ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಉಡುಪಿ ಎರಡು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ISPRL ಅಗ್ನಿಶಾಮಕದಳದವರು ಬೆಂಕಿ ನಂದಿಸಿ ಮೃತ ದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಅಕ್ಕಪಕ್ಕದಲ್ಲಿ ಬೇರೆ ಅಂಗಡಿ ಹಾಗೂ ಮನೆಗಳಿದ್ದು ಅಗ್ನಿಶಾಮಕ ದಳದ ವೇಗದ ಕಾರ್ಯಚರಣೆಯಿಂದ ದೊಡ್ಡ ಅನಾಹುತಯೊಂದು ತಪ್ಪಿದೆ. ಇನ್ನೂ ಬೆಂಕಿಯ ತೀವ್ರತೆ ಗುಜರಿ ಅಂಗಡಿ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ..