ಕ್ರಾಕ್ಸ್ ಚಪ್ಪಲಿಯಲ್ಲಿ ಅಡಗಿದ್ದ ಕೊಳಕು ಮಂಡಲ ಹಾವು ಕಚ್ಚಿ ವ್ಯಕ್ತಿ ಸಾವು
ಬೆಂಗಳೂರು: ಚಪ್ಪಲಿ ಅಥವಾ ಶೂ ಧರಿಸುವ ಮುನ್ನ ಅದನ್ನೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿ. ಯಾಕಂದರೆ ಇಲ್ಲೋರ್ವರು ಕ್ರಾಕ್ಸ್ ಚಪ್ಪಲಿಯೊಳಗೆ ಸೇರಿಕೊಂಡಿದ್ದ ಕೊಳಕು ಮಂಡಲ ಹಾವು ಕಚ್ಚಿ ಮೃತಪಟ್ಟಿದ್ದಾರೆ.
ಬೆಂಗಳೂರು ಹೊರವಲಯದ ಬನ್ನೇರುಘಟ್ಟದ ರಂಗನಾಥ ಬಡಾವಣೆಯ ನಿವಾಸಿ ಮಂಜು ಪ್ರಕಾಶ್(41) ಮೃತಪಟ್ಟ ದುರ್ವೈವಿ. ಪ್ರಕಾಶ್ ಅವರು ಹಾವು ಕಚ್ಚಿದ್ದರಿಂದ ಕಾಲಿನ ಸ್ಪರ್ಶಶಕ್ತಿಯನ್ನೇ ಕಳೆದುಕೊಂಡು ಮೃತಪಟ್ಟಿದ್ದಾರೆ.
ಮಂಜು ಪ್ರಕಾಶ್ ಆಗಸ್ಟ್ 30ರಂದು ಬೆಳಗ್ಗೆ ಮನೆಯಿಂದ ಹೊರಹೋಗಲು ಸಿದ್ಧವಾಗಿದ್ದಾರೆ. ಎಂದಿನಂತೆ ಅವರು ತಮ್ಮ ಕ್ರಾಕ್ಸ್ ಚಪ್ಪಲಿಯನ್ನು ಧರಿಸಿ ಹೊರಹೋಗಿದ್ದಾರೆ. ಈ ಚಪ್ಪಲಿಯೊಳಗೆ ಕೊಳಕು ಮಂಡಲ ಹಾವು ಅಡಗಿಕೊಂಡಿತ್ತು. ಅದನ್ನು ಗಮನಿಸದ ಮಂಜು ಪ್ರಕಾಶ್, ಚಪ್ಪಲಿಯನ್ನು ಧರಿಸಿ ಹೊರಗೆ ಹೋಗಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ವಾಪಸ್ ಮನೆಗೆ ಮರಳಿ ಬಂದು ಮಲಗಿದ್ದಾರೆ. ಆಗಲೇ ಚಪ್ಪಲಿಯೊಳಗೆ ಅಡಗಿದ್ದ ಹಾವು ಕಚ್ಚಿದ ಪರಿಣಾಮ ಅವರ ದೇಹದಲ್ಲಿ ವಿಷ ಏರಿದ್ದು, ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.
ಇನ್ನು ನೆರೆಮನೆಯ ನಿವಾಸಿಯೊಬ್ಬರು ಚಪ್ಪಲಿಯನ್ನು ಗಮನಿಸಿದಾಗ, ಅದರೊಳಗೆ ಹಾವು ಸತ್ತಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಅವರು ಮಂಜು ಮನೆಯವರಿಗೆ ತಿಳಿಸಿದ್ದಾರೆ. ಆದರೆ ಆ ವೇಳೆಗೆ ಮಂಜು ಪ್ರಕಾಶ್ ಮಲಗಿದ್ದ ಹಾಸಿಗೆಯ ಮೇಲೆಯೇ ಅಸ್ವಸ್ಥವಾಗಿ ಬಿದ್ದಿದ್ದರು. ಮನೆಯವರು ಬಂದು ಗಮನಿಸಿದಾಗ ಅದಾಗಲೇ ಅವರ ಮಂಜು ಅವರ ಸಾವನ್ನಪ್ಪಿದ್ದರು.
ಮೃತ ಮಂಜು ಪ್ರಕಾಶ್ ಅವರು ಕಳೆದ ಕೆಲವು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ತಮ್ಮ ಕಾಲಿನ ಸ್ಪರ್ಶಶಕ್ತಿಯನ್ನು ಕಳೆದುಕೊಂಡಿದ್ದರು. ಹಾವು ಸಹ ಅದೇ ಕಾಲಿಗೆ ಕಚ್ಚಿರುವುದರಿಂದ ಅವರಿಗೆ ಅದು ಗೊತ್ತಾಗಿಲ್ಲ. ಕೊನೆಗೆ ಮನೆಗೆ ಬಂದು ಮಲಗಿದ್ದಾಗ ದೇಹದಲ್ಲಿ ವಿಷ ಹರಡಿ ಅವರು ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.