ಬಜರಂಗದಳದಿಂದ ಪಂಪ್ ವೆಲ್ to ಹಂಪನಕಟ್ಟೆಯವರೆಗೆ ನಡೆಯಿತು ಹಾಲಿನ ವಾಹನ ಚೇಸಿಂಗ್; ಸಿಕ್ಕಿತು ಹಾಲಿನ ಪ್ಯಾಕೆಟ್ ನಡುವೆ ಗೋಮಾಂಸ!


(ಗಲ್ಫ್ ಕನ್ನಡಿಗ)ಮಂಗಳೂರು; ಬಜರಂಗದಳ ಕಾರ್ಯಕರ್ತರು ಮಂಗಳೂರಿನ ಪಂಪ್ ವೆಲ್ ನಿಂದ ಹಂಪನಕಟ್ಟೆಯವರೆಗೆ ಹಾಲಿನ ವಾಹನ ಚೇಸಿಂಗ್ ಮಾಡಿ ಅಕ್ರಮ ಗೋಮಾಂಸ ಸಾಗಾಟ ಪತ್ತೆ ಹಚ್ಚಿದ್ದಾರೆ.

(ಗಲ್ಫ್ ಕನ್ನಡಿಗ)ಮಂಗಳೂರಿನ ಹಂಪನಕಟ್ಟೆ ಮಿಲಾಗ್ರಿಸ್ ನಲ್ಲಿ ಹಾಲಿನ ವಾಹನವನ್ನು ಇಂದು ಬೆಳಿಗ್ಗೆ ಭಜರಂಗದಳ ಕಾರ್ಯಕರ್ತರು ತಡೆದಿದ್ದಾರೆ. ಅವರಿಗೆ ಬಂದ ಮಾಹಿತಿಯಂತೆ ಅದರಲ್ಲಿ ಗೋಮಾಂಸ ಸಾಗಾಟ ಮಾಡಲಾಗುತ್ತಿತ್ತು. ಅದರಂತೆ ಪಂಪ್ ವೆಲ್ ನಿಂದಲೇ ಬೆನ್ನಟ್ಟಿಕೊಂಡು ಬಂದಿದ್ದಾರೆ.

(ಗಲ್ಫ್ ಕನ್ನಡಿಗ)ಹಂಪನಕಟ್ಟೆಯಲ್ಲಿ ಈ ಹಾಲಿನ ವಾಹನ ತಡೆದು ನಿಲ್ಲಿಸಿದಾಗ ಅದರಲ್ಲಿ ಹಾಲಿನ ಪ್ಯಾಕೆಟ್ ನಡುವೆ ಗೋಮಾಂಸ ಇರಿಸಿರುವುದು ಪತ್ತೆಯಾಗಿದೆ. ವಾಹನದಲ್ಲಿದ್ದ ಇಬ್ಬರು ಪರಾರಿಯಾಗಿದ್ದು ಓರ್ವ ಸೆರೆಸಿಕ್ಕಿದ್ದಾನೆ.

(ಗಲ್ಫ್ ಕನ್ನಡಿಗ)ಹಾಲಿನ ವಾಹನ ತಡೆದ ಬಜರಂಗದಳ ಕಾರ್ಯಕರ್ತರು ಬಂದರು ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿ ವಾಹನ ಮತ್ತು ಗೋಸಾಗಾಟ‌ ಮಾಡುತ್ತಿದ್ದ ಓರ್ವ ಅರೋಪಿಯನ್ನು ಪೊಲೀಸರ ವಶಕ್ಕೊಪ್ಪಿಸಿದ್ದಾರೆ.

(ಗಲ್ಫ್ ಕನ್ನಡಿಗ)