ಮದುವೆಯಾಗುವುದಾಗಿ ನಂಬಿಸಿ 12 ವರ್ಷದಿಂದ ದೈಹಿಕ ಸಂಪರ್ಕ; ಮದುವೆ ದಿನವೇ ಅತ್ಯಾಚಾರ ಪ್ರಕರಣ ದಾಖಲು!


(ಗಲ್ಫ್ ಕನ್ನಡಿಗ)ಮಂಗಳೂರು; ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ ವ್ಯಕ್ತಿಯ ಮದುವೆ ನಡೆಯುತ್ತಿದ್ದ ವೇಳೆ ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.

(ಗಲ್ಫ್ ಕನ್ನಡಿಗ)ಬಂಟ್ವಾಳ ತಾಲೂಕಿನ ಆಲಡ್ಕದ ನಾಸೀರ್ ಎಂಬಾತ ಈ ಕೃತ್ಯ ಮಾಡಿದಾತ.  ಈತ ಯುವತಿಯೊಬ್ಬಳನ್ನು  11 ವರ್ಷಗಳಿಂದ  ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ‌ ಬೆಳೆಸಿ ಬೇರೆ ಯುವತಿ ಜೊತೆಗೆ ಮದುವೆಯಾಗಿದ್ದಾನೆ.ಆತನ ಮದುವೆಯ ದಿನವೇ ಯುವತಿ ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ.

(ಗಲ್ಫ್ ಕನ್ನಡಿಗ)ಈತನ ಮದುವೆ‌ ಅ.12 ರಂದು ಪಾಣೆಮಂಗಳೂರಿನ ಸಭಾಂಗಣದಲ್ಲಿ ನಡೆದಿತ್ತು. ಮದುವೆಯ ವಿಷಯ ತಿಳಿದ ಯುವತಿ ವಿಟ್ಲ ಪೊಲೀಸ್ ಠಾಣೆಗೆ ತೆರಳಿ‌ ದೂರು ನೀಡಿದ್ದಾಳೆ.

(ಗಲ್ಫ್ ಕನ್ನಡಿಗ)