ಮಂಗಳೂರಿನ ಮಟನ್ ನಲ್ಲಿ ಭೀಪ್ ಮಿಕ್ಸ್ ಇದೆಯ? - ಸಂಶಯದ ಮೇಲೆ ಮೇಯರ್ ನೇತೃತ್ವದಲ್ಲಿ ದಾಳಿ(ಗಲ್ಪ್ ಕನ್ನಡಿಗ)ಮಂಗಳೂರು: ಮಂಗಳೂರಿನ ಮಟನ್ ಗಳಲ್ಲಿ ಭೀಪ್ ಮಿಕ್ಸ್ ಇರುವ ಬಗ್ಗೆ ಸಾರ್ವಜನಿಕರ ಆರೋಪದ ಮೇರೆಗೆ ಮಂಗಳೂರು ಮಹಾಮನಗರಪಾಲಿಕೆ ಮೇಯರ್ ದಿವಾಕರ್ ನೇತೃತ್ವದಲ್ಲಿ ಇಂದು ದಿಢೀರ್ ದಾಳಿ ನಡೆಸಲಾಯಿತು.(ಗಲ್ಪ್ ಕನ್ನಡಿಗ)ಮಂಗಳೂರಿನಲ್ಲಿ ಮಾರುಕಟ್ಟೆಗಳಲ್ಲಿ ಸಿಗುವ ಮಟನ್ ಗಳಲ್ಲಿ ಭೀಪ್ ಮಿಕ್ಸ್ ಆಗಿರುತ್ತದೆ ಎಂಬ ಸಾವರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಆದರೆ ದಾಳಿ ವೇಳೆ ಈ ಆರೋಪಕ್ಕೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ.(ಗಲ್ಪ್ ಕನ್ನಡಿಗ)ಮಂಗಳೂರಿನ ಉರ್ವ, ಉರ್ವಾಸ್ಟೋರ್ ಮಾರುಕಟ್ಟೆಗಳ ಮಟನ್ ಮಾರುಕಟ್ಟೆಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಭೀಪ್ ಸ್ಟಾಲ್ ಗಳಲ್ಲಿ ಅಕ್ರಮವಾಗಿ ತಂದ ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ಪರಿಶೀಲನೆ ನಡೆಸಲಾಯಿತು. ಈ ವೇಳೆ ಭೀಪ್ ಸ್ಟಾಲ್ ಗಳು ಖಾಲಿಯಿರುವುದು ಕಂಡುಬಂದಿದೆ. ಒಂದು ಭೀಪ್ ಸ್ಟಾಲ್ ನಲ್ಲಿ ನಾಲ್ಕು ದಿನದ ಹಿಂದಿನ ಭೀಪ್ ನ್ನು ಫ್ರೀಜರ್ ನಲ್ಲಿ ಶೇಖರಿಸಿರುವುದು ತಿಳಿದುಬಂದಿದೆ. ಈ ಸ್ಟಾಲ್ ಗೆ ನೋಟಿಸ್ ನೀಡಲು ಮೇಯರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮೇಯರ್ ಜೊತೆಗೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಪೂರ್ಣಿಮಾ, ಕಿರಣ್ ಕುಮಾರ್, ಕಾರ್ಪೋರೇಟರ್ ಸುಧೀರ್ ಶೆಟ್ಟಿ ಹಾಗು ಮ.ನ.ಪಾ ಅಧಿಕಾರಿಗಳು ಪರಿಶೀಲನೆಯಲ್ಲಿ ಭಾಗಿಯಾಗಿದ್ದರು.(ಗಲ್ಪ್ ಕನ್ನಡಿಗ)