-->

ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘದ ಒಡೆತನ  ನಿವೇಶನದಲ್ಲಿ  ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗೆ ನ್ಯಾಯಾಲಯದ ತಡೆಯಾಜ್ಞೆ

ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘದ ಒಡೆತನ ನಿವೇಶನದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗೆ ನ್ಯಾಯಾಲಯದ ತಡೆಯಾಜ್ಞೆ

ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘದ ಕಚೇರಿ ಕಟ್ಟಡಕ್ಕೆ ತಾಗಿಕೊಂಡಿರುವ ಸಂಘದ ಸ್ವಾಧೀನ ಮತ್ತು  ಒಡೆತನಕ್ಕೆ ಸೇರಿರುವ ಖಾಲಿ ನಿವೇಶನದಲ್ಲಿ ಸಿಟಿ ಸರ್ವೇ ಇಲಾಖೆಯವರಿಗಾಗಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು ಕಾಮಗಾರಿ ಕಾರ್ಯ ನಿಲ್ಲಿಸುವಂತೆ ಸಂಘವು ಮಾಡಿದ ಮನವಿಯನ್ನು ನಿರ್ಲಕ್ಷಿಸಿದ ಸ್ಮಾರ್ಟ್ ಸಿಟಿ ಯೋಜನೆಯ  ಆಡಳಿತ ನಿರ್ದೇಶಕರ ವಿರುದ್ಧ ಪ್ರಾರಂಭದಲ್ಲಿ  ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಸಂಘದ ವತಿಯಿಂದ ದೂರು ದಾಖಲಿಸಲಾಗಿತ್ತು. 

 ನಿರ್ಮಾಣ ಕಾರ್ಯ ನಿಲ್ಲಿಸುತ್ತೇವೆ ಎಂದು ಮೌಖಿಕವಾಗಿ ಭರವಸೆ ನೀಡಿದರು ಕೂಡಾ   ಕಾಮಗಾರಿ ನಿಲ್ಲಿಸದ ಕಾರಣ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಆಡಳಿತ ನಿರ್ದೇಶಕರು; ಮಂಗಳೂರಿನ ನಗರ ಮಾಪನ ಕಚೇರಿಯ ಯೋಜನಾಧಿಕಾರಿ ಹಾಗೂ ರಾಜ್ಯವನ್ನು ಪ್ರತಿನಿಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಅವರನ್ನು ಪ್ರತಿವಾದಿಗಳಾಗಿ ಕಾಣಿಸಿ ಸಂಘದ ನಿವೇಶನದಲ್ಲಿ ಅಕ್ರಮವಾಗಿ ಪ್ರವೇಶಿಸಿ ಕಾಮಗಾರಿ ನಡೆಸದಂತೆ ಶಾಶ್ವತ ನಿರ್ಬಂಧಕಾಜ್ಞೆ ನೀಡುವ೦ತೆ ಪ್ರಾರ್ಥಿಸಿ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಸಂಘದ ವತಿಯಿಂದ ದಾವೆ ಹೂಡಲಾಗಿತ್ತು.

ಮಾನ್ಯ ನ್ಯಾಯಾಲಯವು ಇಂದು ಆದೇಶವನ್ನು ಹೊರಡಿಸಿದ್ದು ಪ್ರತಿವಾದಿಗಳು; ಅವರ ಸೇವಕರು ಹಾಗೂ  ಪ್ರತಿನಿಧಿಗಳು ಯಾರೂ ಸಂಘದ ಒಡೆತನಕ್ಕೆ ಒಳಪಟ್ಟ ನಿವೇಶನವನ್ನು ಪ್ರವೇಶಿಸಿ ಅಕ್ರಮವಾಗಿ ಯಾವುದೇ ಕಾಮಗಾರಿ ನಡೆಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

 ಜೆ.ಸಿ.ಬಿ. ಯ೦ತ್ರದ ಮುಖಾಂತರ ಜಮೀನು ಸಮತಟ್ಟು ಮಾಡುವ ಕೆಲಸ ಮುಗಿಸಿದ್ದು ಪಿಲ್ಲರ್ ಅಳವಡಿಸಲು ಗುಂಡಿ ತೋಡುವ ಕೆಲಸ ಪ್ರಾರಂಭವಾಗಿತ್ತು . 

ಮಂಗಳೂರಿನ ಹೃದಯ ಭಾಗದಲ್ಲಿ ಮಿನಿ ವಿಧಾನಸೌಧದ ಪಕ್ಕದಲ್ಲಿ ಸಂಘವು ನಲವತ್ತೈದು ಸೆನ್ಸ್ ಜಮೀನನ್ನು ಹೊಂದಿದ್ದು ಹತ್ತು ವರ್ಷಗಳ ಹಿಂದೆ ನೂರು ವರ್ಷಗಳಿಗೂ ಹಿಂದಿನ ಇತಿಹಾಸ ಹೊಂದಿರುವ ಸೂಟರ್ ವಾಚನಾಲಯ ಮತ್ತು  ರಾಜಾರಾಮ್ ಬ್ಲಾಕ್ ಇದ್ದ ಎನ್.ಜಿ.ಒ. ಕಟ್ಟಡದ ಭಾಗವನ್ನು  ಕೆಡವಿ ಸದರಿ ಸ್ಥಳದಲ್ಲಿ ಸಿಟಿ ಸರ್ವೇ ಇಲಾಖೆಯ ಕಚೇರಿ ಕಟ್ಟಡ ನಿರ್ಮಾಣವಾಗಿತ್ತು.

 ಇತ್ತೀಚೆಗೆ ಸಂಘದ ಕಾರ್ಯಕಾರಿ ಸಮಿತಿಯ ಅನುಮತಿ ಇಲ್ಲದೆ ಸ್ಮಾರ್ಟ್ ಸಿಟಿ ಯೋಜನೆಯ ಅಡಿ ಸ೦ಘದ ಒಡೆತನದ ಜಮೀನಿನಲ್ಲಿ  ರಸ್ತೆ ನಿರ್ಮಾಣ ಕಾರ್ಯ ನಡೆದಿರುತ್ತದೆ. 

ನೂರು ವರ್ಷಗಳನ್ನು ಪೂರೈಸಿ ಶತಮಾನೋತ್ಸವ ಆಚರಣೆಯ ಈ ವರ್ಷದಲ್ಲಿ  ಸ೦ಘದ ಹಲವಾರು ಹಿರಿಯರ ನಿಸ್ವಾರ್ಥ ತ್ಯಾಗ; ಉದ್ದೇಶಬದ್ದ; ಸಮಪ೯ಣಾ ಭಾವದ ಸೇವೆಯಿಂದ ಪಡೆದಿರುವ  *ಕೋಟ್ಯಂತರ ರೂಪಾಯಿ ಬೆಲೆ ಬಾಳುವ* ಮ೦ಗಳುಾರು ನಗರದ ಹೃದಯ ಭಾಗದಲ್ಲಿರುವ ಅಮೂಲ್ಯವಾದ  ಈ ಜಮೀನನ್ನು ಬಲವ೦ತವಾಗಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಾಗಿ ವಶ ಪಡಿಸಲು ಪ್ರಯತ್ನಿಸಿರುವುದು  ತೀರಾ ವಿಷಾದನೀಯ ಮತ್ತು ವೇದನೀಯ ಸ೦ಗತಿಯಾಗಿದೆ.

ಸಂಘದ ಒಡೆತನದ ಆಸ್ತಿಗಳನ್ನು ರಕ್ಷಿಸುವ ಜವಾಬ್ದಾರಿ ಆಡಳಿತ ಮ೦ಡಳಿಯದ್ದಾಗಿದೆ. ಸಂಘದ ಜಮೀನನ್ನು  ಯಾವುದೇ  ಅತಿಕ್ರಮಣತೆಯಿಂದ ರಕ್ಷಿಸುವ ನಿಟ್ಟಿನಲ್ಲಿ ಶಾಶ್ವತ ನಿರ್ಬಂಧಕಾಜ್ಞೆ ದಾವೆಯನ್ನು ಹೂಡಲಾಗಿದ್ದು ನ್ಯಾಯಾಲಯವು ಮುಂದಿನ ವಿಚಾರಣೆ ದಿನಾಂಕದ ವರೆಗೆ ತಾತ್ಕಾಲಿಕ  ತಡೆಯಾಜ್ಞೆಯನ್ನು ನೀಡಿರುತ್ತದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99