ಇಂದು ಅವರು ಪ್ಯಾಕಪ್ ಮಾಡಲು ಬರದೆ ಇದ್ದರೆ ಪಣಂಬೂರು ಬೀಚಿನಲ್ಲಿ ಆ ಜೀವ ಉಳಿಸುವವರೆ ಇರಲಿಲ್ಲ!
(ಗಲ್ಪ್ ಕನ್ನಡಿಗ)ಮಂಗಳೂರು: ಮಂಗಳೂರಿನ ಪಣಂಬೂರು ಬೀಚಿನಲ್ಲಿ ಇಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಅಜಿತ್ ಎಂಬ 42 ವರ್ಷದ ವ್ಯಕ್ತಿ ಸಮುದ್ರಪಾಲಾಗುತ್ತಿದ್ದ ವೇಳೆ ಅದೃಷ್ಟವಶಾತ್ ಪಾರಾಗಿದ್ದಾರೆ.
(ಗಲ್ಪ್ ಕನ್ನಡಿಗ)ಹೌದು ಇಂದು ಬಳ್ಳಾರಿ ಜಿಲ್ಲೆಯ ನಾಲ್ಕು ಮಂದಿ ಮೋಜಿಗಾಗಿ ಮಂಗಳೂರಿನ ಪಣಂಬೂರು ಬೀಚಿಗೆ ಬಂದಿದ್ದರು. ಮೋಜು ಮಾಡುತ್ತಿದ್ದ ವೇಳೆ ನಾಗಪ್ಪ ಎಂಬವರ ಪುತ್ರ ಅಜಿತ್ ಸಮುದ್ರದಲ್ಲಿ ಅಲೆಗಳ ಸೆಳೆತಕ್ಕೆ ಸಿಲುಕಿಕೊಂಡಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಜೀವರಕ್ಷಕದಳದ ಸಿಬ್ಬಂದಿಗಳು ಅಜಿತ್ ನ್ನು ರಕ್ಷಿಸಿದ್ದಾರೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ಅಷ್ಟಕ್ಕೂ ಇಂದು ಪಣಂಬೂರು ಬೀಚಿನಲ್ಲಿ ಜೀವರಕ್ಷಕದಳದ ಸಿಬ್ಬಂದಿಗಳು ಕರ್ತವ್ಯದಲ್ಲಿ ಇರಲಿಲ್ಲ. ಪಣಂಬೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜೀವರಕ್ಷಕ ದಳದ ಸಿಬ್ಬಂದಿಗಳು ಪಣಂಬೂರು ಬೀಚ್ ಟೂರಿಸಂ ಡೆವಲಪ್ ಮೆಂಟ್ ಪ್ರಾಜೆಕ್ಟ್ ನಲ್ಲಿ ಕರ್ತವ್ಯ ನಿರ್ವಹಿಸುವವರು. ನಿನ್ನೆಗೆ ಜಿಲ್ಲಾಡಳಿತದೊಂದಿಗೆ ಪಣಂಬೂರು ಬೀಚ್ ಟೂರಿಸಂ ಡೆವಲಪ್ ಮೆಂಟ್ ಪ್ರಾಜೆಕ್ಟ್ ನ ಒಪ್ಪಂದ ಮುಗಿದಿತ್ತು. ಪಣಂಬೂರು ಜೀವರಕ್ಷಕ ದಳದ ಸಿಬ್ಬಂದಿಗಳು ತಮ್ಮ ಸಾಮಾಗ್ರಿಗಳನ್ನು ಕೊಂಡೊಯ್ಯಲು ಪಣಂಬೂರು ಬೀಚಿಗೆ ಬಂದಿದ್ದರು. ಈ ವೇಳೆ ಅಜಿತ್ ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿರುವುದು ಕಂಡು ಬಂದಿದೆ. ಕೂಡಲೇ ಸಮುದ್ರಕ್ಕಿಳಿದ ಜೀವರಕ್ಷಕದಳದ ಸಿಬ್ಬಂದಿಗಳು ಅಜಿತ್ ನ್ನು ರಕ್ಷಿಸಿದ್ದಾರೆ. ಒಂದು ವೇಳೆ ಇಂದು ಜೀವರಕ್ಷಕ ದಳದ ಸಿಬ್ಬಂದಿಗಳು ತಮ್ಮ ಸಾಮಾಗ್ರಿಗಳನ್ನು ಕೊಂಡೊಯ್ಯಲು ಬಾರದಿದ್ದರೆ ಅಜಿತ್ ಅವರ ಜೀವವನ್ನು ರಕ್ಷಿಸುವವರು ಇರಲಿಲ್ಲ. ಅದೃಷ್ಟವಶಾತ್ ಅಜಿತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
(ಗಲ್ಪ್ ಕನ್ನಡಿಗ)