ಎರಡನೇ ದಿನವು ಪಣಂಬೂರಿನಲ್ಲಿ ಲೈಪ್ ಗಾರ್ಡ್ ಗಳಿಂದ ಜೀವವುಳಿಸುವ ಕಾರ್ಯ: ಸಮುದ್ರಪಾಲಾಗುತ್ತಿದ್ದ ಇಬ್ಬರ ರಕ್ಷಣೆ
(ಗಲ್ಪ್ ಕನ್ನಡಿಗ)ಮಂಗಳೂರು: ಮಂಗಳೂರಿನ ಪಣಂಬೂರು ಬೀಚಿನಲ್ಲಿ ಎರಡನೇ ದಿನವು ಲೈಪ್ ಗಾರ್ಡ್ ಸಿಬ್ಬಂದಿಗಳಿಂದ ಸಮುದ್ರಪಾಲಾಗುತ್ತಿದ್ದವರ ರಕ್ಷಣೆ ಕಾರ್ಯ ನಡೆದಿದೆ.
(ಗಲ್ಪ್ ಕನ್ನಡಿಗ)ಇಂದು ಪಣಂಬೂರು ಕಡಲತೀರಲದಲ್ಲಿ ಬಿಜಾಪುರ ಮೂಲದ ಶರಣಪ್ಪ (35), ಮಂಗಳೂರಿನ ಜೋಕಟ್ಟೆ ನಿವಾಸಿ ನಾಗರಾಜ ಎಚ್ . ಎಸ್ (18) ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಅಪಾಯಕ್ಕೆ ಸಿಲುಕಿದ್ದರು.
ಜಿಲ್ಲಾಡಳಿತದೊಂದಿಗೆ ಪಣಂಬೂರು ಬೀಚ್ ನಿರ್ವಹಣೆಯ ಒಪ್ಪಂದ ಎರಡು ದಿನದ ಹಿಂದೆ ಮುಗಿದಿದ್ದರೂ ಪಣಂಬೂರು ಬೀಚ್ ಟೂರಿಸಂ ಡೆವಲಪ್ ಮೆಂಟ್ ಪ್ರಾಜೆಕ್ಟ್ ನಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲೈಫ್ ಗಾರ್ಡ್ ಸಿಬ್ಬಂದಿಗಳು ವಾರಂತ್ಯದ ಕಾರಣಕ್ಕೆ ಕರ್ತವ್ಯದಲ್ಲಿದ್ದರು. ಅಪಾಯಕ್ಕೆ ಸಿಲುಕಿದ್ದ ಈ ಇಬ್ಬರನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ:ಇಂದು ಅವರು ಪ್ಯಾಕಪ್ ಮಾಡಲು ಬಾರದೆ ಇದ್ದರೆ ಪಣಂಬೂರು ಬೀಚಿನಲ್ಲಿ ಆ ಜೀವ ಉಳಿಯುತ್ತಿರಲಿಲ್ಲ!
(ಗಲ್ಪ್ ಕನ್ನಡಿಗ)