ಕೊರೊನಾಗೆ ದ.ಕ ಜಿಲ್ಲೆಯಲ್ಲಿ ಇಂದು ಐವರು ಸಾವು


(ಗಲ್ಪ್ ಕನ್ನಡಿಗ ಸುದ್ದಿ) ಮಂಗಳೂರು(ಗ.ಕ): ದ.ಕ. ಜಿಲ್ಲೆ‌ಯಲ್ಲಿ ಇಂದು ಐವರು ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

(ಗಲ್ಪ್ ಕನ್ನಡಿಗ ಸುದ್ದಿ) ಮೃತರಲ್ಲಿ  ಮಂಗಳೂರಿನ 81 ವರ್ಷದ ಪುರುಷ, ಕಳೆದ ಜು. 17 ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಜು. 20 ರಂದು ಸಾವನ್ನಪ್ಪಿದ್ದಾರೆ. ಇವರು ಉಸಿರಾಟದ (ಸಾರಿ) ತೊಂದರೆಯಿಂದ ಬಳಲುತ್ತಿದ್ದರು. 

(ಗಲ್ಪ್ ಕನ್ನಡಿಗ ಸುದ್ದಿ) ಬೆಳ್ತಂಗಡಿ ತಾಲೂಕಿನ‌ ಕಾಜೂರು ನಿವಾಸಿ 51 ವರ್ಷದ ಪುರುಷ ಜೂನ್ 20 ರಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜು. 20 ರಂದು ಸಾವನ್ನಪ್ಪಿದ್ದಾರೆ. ಇವರು ಶ್ವಾಾಾಸಕೋಶದ  ತೊಂದರೆ, ತೀವ್ರ ರಕ್ತದ ಒತ್ತಡ, ಡಯಾಬಿಟೀಸ್, ತೀವ್ರ ಉಸಿರಾಟದ ತೊಂದರೆ ಯಿಂದ ಬಳಲುತ್ತಿದ್ದರು.

(ಗಲ್ಪ್ ಕನ್ನಡಿಗ ಸುದ್ದಿ) ಭಟ್ಕಳ ಮೂಲದ 65 ವರ್ಷದ ಪುರುಷ. ಇವರು ಜುಲೈ 17ರಂದು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದ ಇವರು, ಇಂದು ಸಾವನ್ನಪ್ಪಿದ್ದಾರೆ. ಇವರನ್ನು ಸುರತ್ಕಲ್ ನ ಕೃಷ್ಣಾಪುರ ಜುಮಾ‌ ಮಸೀದಿಯಲ್ಲಿ ದಫನ‌ ಕಾರ್ಯ ನಡೆಸಲಾಗಿದೆ.

(ಗಲ್ಪ್ ಕನ್ನಡಿಗ ಸುದ್ದಿ) ಹಾವೇರಿ ಜಿಲ್ಲೆಯ ಬ್ಯಾಡಗಿಯ 63 ವರ್ಷದ ಪುರುಷ. ಇವರು ಕಿಡ್ನಿ ವೈಫಲ್ಯ, ಕ್ಯಾನ್ಸರ್ ನಿಂದ ಬಳಲುತ್ತಿದ್ದು ಜೂನ್ 27 ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಳಿಕ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಇಂದು ಹೃದಯಾಘಾತದಿಂದ‌ ಸಾವನ್ನಪ್ಪಿದ್ದಾರೆ.
ಮಂಗಳೂರು ತಾಲೂಕಿನ 52  ವರ್ಷದ ಮಹಿಳೆ. ಜು.19 ರಂದು ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದ ಒತ್ತಡ‌ ಕಾಯಿಲೆಯಿಂದ‌ ಬಳಲುತ್ತಿದ್ದರು. ಅವರಲ್ಲಿ ಕೊರೋನಾ ದೃಢ ಪಟ್ಟಿದ್ದು ಇಂದು ಸಾವನ್ನಪ್ಪಿದ್ದಾರೆ.