ಲಾಕ್ ಡೌನ್ ತೆರವು: ಮುಂದೆ ನಾವೇನು ಮಾಡೋಣ?
ರಾಜ್ಯಾದ್ಯಂತ ಲಾಕ್ ಡೌನ್ ಇನ್ನು ಮುಂದೆ ಮಾಡುವುದಿಲ್ಲ ನಾಡದೊರೆ ತಿಳಿಸಿದ್ದಾರೆ. ಕೊರೊನಾದಿಂದ ಆತಂಕದಲ್ಲಿ ದಿನದೂಡುತ್ತಿರುವ ಹಲವರಿಗೆ ಲಾಕ್ ಡೌನ್ ಮುಂದೆ ಮಾಡುವುದಿಲ್ಲ ಎಂಬುದು ಆತಂಕ ಸೃಷ್ಟಿಸಿದ್ದರೆ , ದುಡಿಮೆಯಿಂದಲೆ ಬದುಕು ಸಾಧ್ಯ ಎಂದು ದಿನದ ದುಡಿಮೆಯನ್ನು ಮಾಡುತ್ತಿರುವ ಹಲವರಿಗೆ ಖುಷಿ ಕೊಟ್ಟಿರುವ ಹೇಳಿಕೆ ಇದು.
ಲಾಕ್ ಡೌನ್ ನಿಂದ ಕೊರೊನಾ ಕಡಿಮೆಯಾಗುತ್ತದೆ , ಜನರಿಗೆ ಹರಡುವ ಚೈನ್ ಲಿಂಕ್ ತಪ್ಪುತ್ತದೆ ಎಂಬುದು ಲಾಕ್ ಡೌನ್ ಹೇರಬೇಕೆಂಬ ವಾದ ಮಾಡುತ್ತಿರುವವರು ಹೇಳಿದರೆ, ಒಂದು ದಿನದ ಊಟಕ್ಕೂ ಗತಿಯಿಲ್ಲದೆ ಇರುವ ಹಲವು ಮಂದಿ, ಉದ್ಯಮವನ್ನು ನಡೆಸುವವರು, ಕೂಲಿ ಕಾರ್ಮಿಕರು ಮೊದಲಾದವರು ಲಾಕ್ ಡೌನ್ ನಿಂದ ತಮ್ಮ ಬದುಕು ಸಂಕಷ್ಟಕ್ಕೊಳಗಾಗಿದೆ ಎಂದು ಕೊರಗುತ್ತಿದ್ದಾರೆ.
ಇಷ್ಟಕ್ಕೂ ಲಾಕ್ ಡೌನ್ ಮಾಡುವುದರಿಂದ ಕೊರೊನಾ ಕಡಿಮೆಯಾಗುವುದಿಲ್ಲ ಎಂಬುದನ್ನು ಈಗಾಗಲೆ ಹಲವು ತಜ್ಙರುಗಳು ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ. ಕೊರೊನಾ ಸಮುದಾಯಕ್ಕೆ ಹರಡಿರುವುದರಿಂದ ಕೊರೊನಾವನ್ನು ಲಾಕ್ ಡೌನ್ ನಿಂದ ನಿಯಂತ್ರಿಸಲು ಸಾಧ್ಯವಿಲ್ಲ, ಮುಂದೂಡಬಹುದಷ್ಟೆ ಎಂಬುದು ಕೇಳಿಬರುತ್ತಿರುವ ವಾದ. ಇದೇನೆ ಇರಲಿ, ಇನ್ನು ಮುಂದೆ ರಾಜ್ಯದಲ್ಲಿ ಲಾಕ್ ಡೌನ್ ಇರುವುದಿಲ್ಲ ಎಂಬುದನ್ನು ರಾಜ್ಯ ಸರಕಾರ ಪ್ರಕಟಿಸಿದೆ. ಲಾಕ್ ಡೌನ್ ತೆರವು ಆಗಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಜನರ ಜವಬ್ದಾರಿಯು ದೊಡ್ಡದಿದೆ. ಈ ಸಂದರ್ಭದಲ್ಲಿ ನಾವೇನು ಮಾಡಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.
ಕೊರೊನಾ ವೈರಸ್ ತಡೆಗಟ್ಟಲು ಮೊದಲಿಗೆ ಬೇಕಾದದ್ದು ಸರಕಾರ ನೀಡಿರುವ ಸೂಚನೆ ಗಳನ್ನು ಪಾಲಿಸಬೇಕಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು. ಮೊದಲಾದವು. ಕೆಲಸದ ಸಂದರ್ಭದಲ್ಲಿ ಮಾಸ್ಕ್ ಧರಿಸಿ ಕೆಲಸ ಕಾರ್ಯ ಮಾಡಲು ಹೆಚ್ಚಿನ ಒತ್ತು ನೀಡಿ. ಹಲವೆಡೆ ಮಾಸ್ಕ್ ಧರಿಸಿ ಕೆಲಸ ಮಾಡಲು ಕಿರಿಕಿರಿಯಾಗಬಹುದಾದರೂ ಇದನ್ನು ಈಗ ಅನಿವಾರ್ಯವಾಗಿ ಪಾಲಿಸಬೇಕಾದದ್ದು ಅಗತ್ಯ. ವಾಹನಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರಕ್ಕೆ ಹೆಚ್ಚಿನ ಒತ್ತು ನೀಡಿ. ಸಾರ್ವಜನಿಕ ಸಾರಿಗೆಗಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಯಾರು ಎಂದು ತಿಳಿದಿರುವುದಿಲ್ಲ. ಜೊತೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಕೊರೊನಾ ವೈರಸ್ ಇಲ್ಲದಿದ್ದರೂ ಆತ ಕೊರೊನಾ ವೈರಸ್ ನಿಮಗೆ ಹರಡಬಹುದೆ ಎಂಬುದನ್ನು ಮನದಲ್ಲಿಟ್ಟುಕೊಂಡು ಆತನಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು , ಮಾಸ್ಕ ಧರಿಸುವುದು ಕಡ್ಡಾಯವಾಗಿ ಮಾಡಿ.
ಮನೆಯಿಂದಲೆ ಹೊರಡುವ ಸಂದರ್ಭದಲ್ಲಿ ಮಾಸ್ಕ್ ಧರಿಸುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಎಸಿ ಇರುವ ಸಾರಿಗೆ ವಾಹನಗಳನ್ನು ಬಳಸುವುದನ್ನು ಬಿಡಿ, ಇದು ನೀವು ಸಾಮಾಜಿಕ ಅಂತರ ಕಾಪಾಡಿಕೊಂಡರೂ ಕೊರೊನಾ ಸೋಂಕಿತ ಅಲ್ಲಿದ್ದರೆ ಹರಡುವುದನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. ಕೆಲಸದ ವೇಳೆಯಲ್ಲಿ ಜೊತೆಗಾರರು ಎಷ್ಟೆ ಅತ್ಮೀಯರಾಗಿದ್ದರೂ ಅವರ ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು , ಮಾಸ್ಕ್ ಧರಿಸುವುದನ್ನು ತಪ್ಪದೆ ಪಾಲಿಸಿ. ಇದರಲ್ಲಿ ಯಾವುದೆ ಮುಲಾಜು ತೋರಿಸಬೇಡಿ.
ಅನಗತ್ಯವಾಗಿ ಯಾವುದೇ ವಸ್ತುವನ್ನು ಮುಟ್ಟುವುದನ್ನು ತಪ್ಪಿಸಿಕೊಳ್ಳಿ. ಕೆಲಸದ ವೇಳೆಯಲ್ಲಿ ಯಾವುದೆ ವಸ್ತುಗಳನ್ನು ಮುಟ್ಟಿದರೂ ಕೈಯನ್ನು ಸಾಬೂನು ಅಥವಾ ಸ್ಯಾನಿಟೈಸರ್ ನಿಂದ ಶುದ್ದಗೊಳಿಸಿ. ಕಣ್ಣು, ಬಾಯಿ, ಮೂಗಿಗೆ ಪದೆ ಪದೆ ಕೈಯನ್ನು ಹಾಕುವುದನ್ನು ತಪ್ಪಿಸಿಕೊಳ್ಳಿ
ಇದರ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸುವುದನ್ನು ಮಾಡಿ. ಶೀತ , ಜ್ವರ ಬಾರದಂತೆ ನೋಡಿಕೊಳ್ಳಿ. ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಿ.
ಲಾಕ್ ಡೌನ್ ನಿಂದ ಕೊರೊನಾ ಹರಡುವುದನ್ನು ಮುಂದುಡಬಹುದೆ ಹೊರತು ನಿಯಂತ್ರಿಸಲು ಆಗುವುದಿಲ್ಲ ಎಂಬುದು ತಜ್ಞರ ಮಾತುಗಳು. ಸರಕಾರವು ಲಾಕ್ ಡೌನ್ ಇನ್ನು ರಾಜ್ಯದಲ್ಲಿ ಮುಂದುವರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದೆಲ್ಲದರ ನಡುವೆ ಕೊರೊನಾ ನಮ್ಮ ದೇಹದಲ್ಲಿ ಆಶ್ರಯ ಪಡೆಯದಂತೆ ಮುನ್ನೆಚ್ಚರಿಕೆಗಳನ್ನು ನಾವೇ ವಹಿಸಬೇಕಾಗಿದೆ.