ಮತ್ತೆ ಸುದ್ದಿಯಾದ ಬಿಗ್ ಬಾಸ್ ಸ್ಪರ್ಧಿ, ಸ್ಯಾಂಡಲ್ ವುಡ್ ಚೆಲುವೆ ಜಯಶ್ರೀ ರಾಮಯ್ಯ
Wednesday, July 22, 2020
(ಗಲ್ಪ್ ಕನ್ನಡಿಗ. ಕಾಮ್) ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ ಅವರು ಇಂದು ರಾಜ್ಯದಲ್ಲಿ ಸುದ್ದಿಯಾಗಿದ್ದಾರೆ. ಸ್ಯಾಂಡಲ್ ವುಡ್ ನಟಿಯಾಗಿರುವ ಜಯಶ್ರೀ ರಾಮಯ್ಯ ಇಂದು ಬೆಳಿಗ್ಗೆ i quit, goodbye the world and depression ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಭಾರಿ ಆತಂಕಕ್ಕೆ ಕಾರಣವಾಗಿತ್ತು. ಜಯಶ್ರೀ ರಾಮಯ್ಯ ಅವರು ಹಾಕಿದ ಮೆಸೆಜ್ ಬಳಿಕ ಅವರನ್ನು ಸಂಪರ್ಕಿಸಲು ಹಲವರು ಪ್ರಯತ್ನಿಸಿದರೂ ಅವರ ಕರೆಯನ್ನು ಸ್ವೀಕರಿಸಿರಲಿಲ್ಲ. ಇದರಿಂದ ಮತ್ತಷ್ಟು ಆತಂಕ ಹೆಚ್ಚಿತ್ತು. ಬಳಿಕ ಅವರು I'm Alright and safe!! Love you all ಎಂಬ ಪೋಸ್ಟ್ ಹಾಕಿದ್ದಾರೆ. ಇದರಿಂದ ಜಯಶ್ರೀ ರಾಮಯ್ಯ ಬಗ್ಗೆ ಇದ್ದ ಆತಂಕ ದೂರವಾಗಿದೆ.
(ಗಲ್ಪ್ ಕನ್ನಡಿಗ. ಕಾಮ್) ಜಯಶ್ರೀ ರಾಮಯ್ಯ ಅವರು ಖಿನ್ನತೆಯಿಂದ ನಿನ್ನೆ ಬೆಂಗಳೂರಿನ ಜಯನಗರದ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗವ ವೇಳೆಯಲ್ಲಿ ಅವರು ಎಲ್ಲವನ್ನು ತೊರೆಯುತ್ತೇನೆ ಎಂಬರ್ಥದಲ್ಲಿ ಹಾಕಿದ ಪೋಸ್ಟ್ ಇಷ್ಟೆಲ್ಲಾ ಆತಂಕಕ್ಕೆ ಕಾರಣವಾಗಿತ್ತು. ಬಳಿಕ ಆ ಪೋಸ್ಟನ್ನು ಡಿಲಿಟ್ ಮಾಡಿದ ಅವರು I'm Alright and safe!! Love you all ಎಂಬ ಪೋಸ್ಟ್ ಹಾಕಿದ್ದಾರೆ. ಇವರ ಈ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಗಳು ಬಂದಿದ್ದು ಎಲ್ಲರೂ ಆತಂಕಗೊಂಡಿದ್ದರು.
(ಗಲ್ಪ್ ಕನ್ನಡಿಗ. ಕಾಮ್) ಮೂಲಗಳ ಪ್ರಕಾರ ಇವರು i quit, goodbye the world and depression ಎಂದು ಹಾಕಿದ ಪೋಸ್ಟನ್ನು ಪುಟ್ಟೇನಹಳ್ಳಿ ಇನ್ಸ್ ಪೆಕ್ಟರ್ ರಾಮಚಂದ್ರಪ್ಪ ಚೌದರಿ ಅವರು ಗಮನಿಸಿ ಜಯಶ್ರೀ ಅವರನ್ನು ಮನವೊಲಿಸಿದ್ದಾರೆ
(ಗಲ್ಪ್ ಕನ್ನಡಿಗ. ಕಾಮ್)ಜಯಶ್ರೀ ರಾಮಯ್ಯ ಅವರು 2013 ರಲ್ಲಿ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದು 2017 ರಲ್ಲಿ ಉಪ್ಪು ಹುಳಿ ಖಾರ, 2019 ರಲ್ಲಿ ಕನ್ನಡ ಗೊತ್ತಿಲ್ಲ ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ಶಿರಾಡಿ ಘಾಟ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.