ಹಳ್ಳಿಹಕ್ಕಿಗೆ ಕೊನೆಗೂ ಸಿಕ್ಕಿತು ಗೂಡು!- ಹೆಚ್ ವಿಶ್ವನಾಥ್ ಇನ್ನು ಎಂ ಎಲ್ ಸಿ!
ಪ್ರಾರ್ಥನ
(ಗಲ್ಪ್ ಕನ್ನಡಿಗ ವಿಶೇಷ) ಒಂದು ಕಾಲದಲ್ಲಿ ಪ್ರಭಾವಿ ರಾಜಕೀಯ ಮುಖಂಡರಾಗಿ ಇತ್ತೀಚೆಗೆ ಬಿಜೆಪಿಯಲ್ಲಿ ಅವಕಾಶವನ್ನು ಹರಸಿಕೊಂಡು ಬಂದು ಅತಂತ್ರರಾಗಿದ್ದ ಹಳ್ಳಿಹಕ್ಕಿಗೆ ಕೊನೆಗೂ ಗೂಡು ಸಿಕ್ಕಿದೆ. ಬಿಜೆಪಿ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ ಮೇರುನಾಯಕ ಬಿಜೆಪಿಗೆ ಹೋದ ಬಳಿಕ ನಿರ್ಲಕ್ಷ್ಯಗೊಳಗಾಗಿದ್ದರೂ ಎಂಬ ಭಾವನೆ ಎಲ್ಲರ ಮನದಲ್ಲಿತ್ತು. ಈ ಬಗ್ಗೆ ಸ್ವತಃ ವಿಶ್ವನಾಥ್ ಕೂಡ ಅಂಜಿಕೊಂಡಿದ್ದರು. ಆದರೆ ಕೊಟ್ಟ ಮಾತನ್ನು ತಪ್ಪಲಾರದ ನಾಯಕ ಎಂದು ಯಡಿಯೂರಪ್ಪ ರನ್ನು ಅಡಕತ್ತರಿಯಲ್ಲಿ ಸಿಲುಕಿಸಿ ಕೊನೆಗೂ ಅವಕಾಶವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಚ್ ವಿಶ್ವನಾಥ್ ಮುಖ್ಯಮಂತ್ರಿಯಾಗುವ ಅರ್ಹತೆಯುಳ್ಳ ನಾಯಕರಾಗಿದ್ದವರು. ಆದರೆ ಅವರು ತಮ್ಮ ರಾಜಕೀಯ ನಿವೃತ್ತಿ ಅಂಚಿನಲ್ಲಿ ವಿಧಾನಪರಿಷತ್ ಸದಸ್ಯತ್ವ ಪಡೆಯಲು ಕಸರತ್ತು ನಡೆಸಬೇಕಾಗಿ ಬಂದದ್ದು ದುರ್ದೈವವೆ ಸರಿ.
(ಗಲ್ಪ್ ಕನ್ನಡಿಗ ವಿಶೇಷ)ಹೆಚ್ ವಿಶ್ವನಾಥ್ ಯಡಿಯೂರಪ್ಪ ಸರಕಾರ ಬರಲು ಪ್ರಮುಖರಾಗಿ ತಂತ್ರಗಾರಿಕೆ ರೂಪಿಸಿದವರು. ಕಾಂಗ್ರೆಸ್ ನಲ್ಲಿ ದಶಕಗಳ ಕಾಲ ರಾಜಕೀಯ ಮಾಡಿದ್ದ ವಿಶ್ವನಾಥ್ ಗೆ ಮಾಜಿ ಪ್ರಧಾನಿ ದೇವೆಗೌಡರು ಶಾಸಕನಾಗಿ ಮಾಡಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದರು. ಆದರೆ ಅಲ್ಲಿ ತೃಪ್ತಿ ಕಾಣದ ವಿಶ್ವನಾಥ್ ಹಲವು ದಶಕಗಳಿಂದ ತಾವೇ ವಿರೋಧಿಸುತ್ತಾ ಬಂದಿದ್ದ ಬಿಜೆಪಿ ಸೆರಗು ಹಿಡಿದುಕೊಂಡರು. ವಿಶ್ವನಾಥ್ ನಡೆ ರಾಜಕೀಯದಲ್ಲಿ ಅಚ್ಚರಿಗೆ ಕಾರಣವಾಗಿತ್ತು.
(ಗಲ್ಪ್ ಕನ್ನಡಿಗ ವಿಶೇಷ) ಬಿಜೆಪಿ ನಾಯಕರೊಂದಿಗೆ ಸೇರಿಕೊಂಡು ಬಂಡಾಯ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರೊಂದಿಗೆ ತಮ್ಮದೆ ಪಕ್ಷದ ಸರಕಾರವನ್ನು ಉರುಳಿಸಿ ಕುಮಾರಸ್ವಾಮಿ ರಾಜೀನಾಮೆಗೆ ಕಾರಣವಾಗಿದ್ದ ವಿಶ್ವನಾಥ್ ಗೆ ಬಿಜೆಪಿ ಸರಕಾರ ಬಂದು ಒಂದು ವರ್ಷವಾದರೂ ಸರಿಯಾದ ಸ್ಥಾನಮಾನ ಸಿಕ್ಕಿರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಮೂಲಕ ರಾಜಕೀಯವಾಗಿ ಮೂಲೆಗುಂಪಾಗುವ ಭೀತಿಯಲ್ಲಿದ್ದರು. ಬಳಿಕ ವಿಧಾನಪರಿಷತ್ ಗೆ ಮಾಡಿದ ಲಾಬಿಯು ಫಲಿಸಿರಲಿಲ್ಲ. ಇದರಿಂದ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ನೊಂದುಕೊಂಡಿದ್ದರು. ಆದರೆ ಈ ಬಾರಿ ಎಂ ಎಲ್ ಸಿ ನಾಮನಿರ್ದೇಶನದ ಅವಕಾಶ ಬಂದಾಗ ಯಡಿಯೂರಪ್ಪನವರು ಐದರಲ್ಲಿ ಎರಡು ಸ್ಥಾನ ತಾನು ಹಳಿದವರಿಗೆ ಆಗಬೇಕೆಂದು ಹೇಳಿ ವಿಶ್ವನಾಥ್ ಅವರನ್ನು ಎಂ ಎಲ್ ಸಿ ಮಾಡಿದ್ದಾರೆ. ಗುಟ್ಟಾಗಿ ಇಟ್ಟುಕೊಂಡು ಎಂ ಎಲ್ ಸಿ ಸ್ಥಾನವನ್ನು ಘೋಷಣೆ ಮಾಡಿದ್ದಾರೆ.
(ಗಲ್ಪ್ ಕನ್ನಡಿಗ ವಿಶೇಷ) ಈ ಮೊದಲೆ ಹೇಳಿದಂತೆ ಕಾಂಗ್ರೆಸ್ ನಲ್ಲಿದ್ದಾಗ ವಿಶ್ವನಾಥ್ ಅವರು ಮುಖ್ಯಮಂತ್ರಿ ಸ್ಥಾನದ ಅರ್ಹತೆ ಹೊಂದಿದ್ದ ವ್ಯಕ್ತಿ. ಸಿದ್ದರಾಮಯ್ಯ ಅವರ ಜೊತೆ ಮುನಿಸಿಕೊಂಡು ಜೆಡಿಎಸ್ ನಲ್ಲಿ ರಾಜಕೀಯ ಮಾಡಲು ಹೊರಟ ಅವರಿಗೆ ಅಲ್ಲಿನ ವ್ಯವಸ್ಥೆ ಸರಿತೋರಿರಲಿಲ್ಲ. ಆದರೆ ಕೊನೆಗೆ ತಮ್ಮ ರಾಜಕೀಯ ಬದ್ದ ವೈರಿಯನ್ನೆ ಆಲಂಗಿಸಿಕೊಂಡ ಅವರಿಗೆ ಕಳೆದ ಒಂದು ವರ್ಷ ಬಿಜೆಪಿಯಲ್ಲಿನ ನಿರ್ಲಕ್ಷ್ಯ, ವಿರೋಧಿಗಳ ಹಂಗಿನ ಮಾತುಗಳು ಸಾಕಷ್ಟು ನೋವು ತಂದಿತ್ತು. ಇದೀಗ ಮಾತು ತಪ್ಪಲಾರದ ಯಡಿಯೂರಪ್ಪ ಎಂದೆ ಹೇಳಿಕೊಂಡು ಬಂದ ವಿಶ್ವನಾಥ್ ಅವರು ಅವರಿಂದಲೇ ಎಂ ಎಲ್ ಸಿ ಸ್ಥಾನದ ಕೊಡುಗೆಯನ್ನು ಪಡೆದುಕೊಂಡಿದ್ದಾರೆ.
(ಗಲ್ಪ್ ಕನ್ನಡಿಗ ವಿಶೇಷ)