ದ.ಕ. ಜಿಲ್ಲೆಯಲ್ಲಿ ಐವರು ಸಾವು ,162 ಮಂದಿಗೆ ಪಾಸಿಟಿವ್; 3,996ಕ್ಕೆ ಸೋಂಕಿತರ ಸಂಖ್ಯೆ
(ಗಲ್ಪ್ ಕನ್ನಡಿಗ) ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾದಿಂದ ಐವರು ಸಾವನ್ನಪ್ಪಿದ್ದಾರೆ. ಇಂದು 162 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3996 ಕ್ಕೆ ಏರಿಕೆಯಾಗಿದೆ.
(ಗಲ್ಪ್ ಕನ್ನಡಿಗ)ಇಂದು ಪತ್ತೆಯಾದ 162 ಪ್ರಕರಣಗಳ ಪೈಕಿ, 13ಮಂದಿ ಪ್ರಾಥಮಿಕ ಸಂಪರ್ಕದಿಂದ 70 ಐಎಲ್ಐ ಪ್ರಕರಣಗಳಿಂದ, 18 ಸಾರಿ ಪ್ರಕರಣಗಳಿಂದ ಸೋಂಕು ಕಾಣಿಸಿ ಕೊಂಡಿದೆ. ವಿದೇಶದಿಂದ ಜಿಲ್ಲೆಗೆ ಆಗಮಿಸಿರುವ ಒಬ್ಬರಲ್ಲಿ ಮಂದಿಯಲ್ಲಿ ಕೋವಿಡ್ ದೃಢ ಪಟ್ಟಿದೆ. 60ಮಂದಿಗೆ ಸೋಂಕು ತಗುಲಿರುವ ಮೂಲಗಳು ಪತ್ತೆಯಾಗಿಲ್ಲ.
(ಗಲ್ಪ್ ಕನ್ನಡಿಗ) ಇಂದು 69 ಮಂದಿ ಕೋವಿಡ್ ಸೋಂಕಿತರು ಕೋವಿಡ್ ಆಸ್ಪತ್ರೆ ವೆನ್ ಲಾಕ್ ಸೇರಿ ವಿವಿಧ ಖಾಸಗಿ ಆಸ್ಪತ್ರೆಗಳಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
ಈವರೆಗೆ 30,297 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರ ಪೈಕಿ 3996 ಮಂದಿಗೆ ಸೋಂಕು ದೃಢಪಟ್ಟಿದೆ. 2,160 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 1,744 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.