ಸುಮಲತಾ ಅಂಬರೀಷ್ ಕೊರೊನಾದಿಂದ ಗುಣಮುಖ

(ಗಲ್ಪ್ ಕನ್ನಡಿಗ) ಮಂಡ್ಯ: ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಕೊರೊನಾದಂದ ಇಂದು ಗುಣಮುಖರಾಗಿದ್ದಾರೆ.

ಜುಲೈ 6 ರಂದು ಸುಮಲತಾ ಅಂಬರೀಷ್ ಅವರಿಗೆ ಕೊರೊನಾ ಇರುವುದು ದೃಢಪಟ್ಟಿತ್ತು. ಅವರಿಗೆ ಜುಲೈ 4 ರಂದು ಗಂಟಲು ನೋವು ಮತ್ತು ತಲೆ ನೋವು ಕಾಡುತ್ತಿದ್ದು ಇದರಿಂದ ಅವರು ಕೊರೊನಾ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿತ್ತು. ಬಳಿಕ ಅವರು ಆಸ್ಪತ್ರೆಯಲ್ಲಿ ಚಿಕಿತ್ಷೆ ಪಡೆಯುತ್ತಿದ್ದರು. ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿ ಅಭಿಮಾನಿಗಳು ದೇವಾಲಯಗಳಲ್ಲಿ ಪೂಜೆಗಳನ್ನು ಸಲ್ಲಿಸಿದ್ದರು.


(ಗಲ್ಪ್ ಕನ್ನಡಿಗ) ಇಂದು ಅವರ ಗಂಟಲು ದ್ರವ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದಿದ್ದು ಅವರನ್ನು ಗುಣಮುಖರೆಂದು ಘೋಷಿಸಿ ಮನೆಗೆ ಕಳುಹಿಸಲಾಗಿದೆ.


(ಗಲ್ಪ್ ಕನ್ನಡಿಗ) ಈ ಬಗ್ಗೆ ಟ್ವೀಟ್ ಮಾಡಿರುವ ಅವರು ನಿಮ್ಮೆಲ್ಲರ ಪ್ರಾರ್ಥನೆ, ಹಾರೈಕೆಯಿಂದ ಮೂರು ವಾರಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿ ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ಪರೀಕ್ಷೆಯ ನಂತರ ನಾನೀಗ ಕೊರೊನಾ ನೆಗೆಟಿವ್ ಎಂದು ತಿಳಿಸಲು ಸಂತೋಷವಾಗುತ್ತಿದೆ. ವೈದ್ಯರ ಸಲಹೆಯಂತೆ ನಾಲ್ಕು ವಾರದ ವಿಶ್ರಾಂತಿ ಪಡೆದು ನಿಮ್ಮೆಲ್ಲರ ಸೇವೆಗೆ ಮರಳಿ ಬರಲು ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಜೊತೆಗೆ ಈ ಕೆಳಗಿನಂತೆ ಪತ್ರವನ್ನು ಬರೆದಿದ್ದಾರೆ.


(ಗಲ್ಪ್ ಕನ್ನಡಿಗ)