ದ.ಕ.ದಲ್ಲಿ ಮತ್ತೆ 149 ಮಂದಿಗೆ ಕೋರೋನಾ ಪಾಸಿಟಿವ್; ಐವರು ಸಾವು
Tuesday, July 21, 2020
(ಗಲ್ಪ್ ಕನ್ನಡಿಗ ಸುದ್ದಿ) ಮಂಗಳೂರು (ಗ.ಕ): ದ.ಕ. ಜಿಲ್ಲೆಯಲ್ಲಿ ಇಂದು 149 ಮಂದಿಗೆ ಕೊರೋನಾ ಪಾಸಿಟಿವ್ ದೃಢ ಪಟ್ಟಿದ್ದು, ಸೋಂಕಿತರ ಸಂಖ್ಯೆ 3834ಕ್ಕೆ ಏರಿಕೆಯಾಗಿದೆ. ಅಲ್ಲದೆ, ಐವರು ಮೃತಪಟ್ಟಿದ್ದಾರೆ.
(ಗಲ್ಪ್ ಕನ್ನಡಿಗ ಸುದ್ದಿ) ಇಂದು ಪತ್ತೆಯಾದ ಪ್ರಕರಣಗಳಲ್ಲಿ ತೀವ್ರ ಉಸಿರಾಟ ಸಮಸ್ಯೆಯಿಂದ 22 ಮಂದಿಗೆ , ಶೀತದ ಕಾರಣದಿಂದ 76 ಮಂದಿಯಲ್ಲಿ , ವಿದೇಶದಿಂದ ಜಿಲ್ಲೆಗೆ ಬಂದಿರುವ ಒಬ್ಬರಲ್ಲಿ, ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 23 ಮಂದಿಗೆ ಕೊರೊನಾ ದೃಢಗೊಂಡಿದೆ. ಅಲ್ಲದೆ ಯಾವುದೇ ಸಂಪರ್ಕವಿಲ್ಲದ 15 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ.
(ಗಲ್ಪ್ ಕನ್ನಡಿಗ ಸುದ್ದಿ) ವಿವಿಧ ಆಸ್ಪತ್ರೆ, ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 127 ಮಂದಿ ಗುಣಮುಖರಾಗಿದ್ದು
ಇದರೊಂದಿಗೆ ಒಟ್ಟು ಗುಣಮುಖರ ಸಂಖ್ಯೆ 1,675ಕ್ಕೆ ಏರಿದೆ. 2,078 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
(ಗಲ್ಪ್ ಕನ್ನಡಿಗ ಸುದ್ದಿ) ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 29665 ಮಂದಿಯನ್ನು ಕೊರೊನಾ ಪರೀಕ್ಷೆ ನಡೆಸಲಾಗಿದ್ದು, 3834 ಮಂದಿಗೆ ಪಾಸಿಟಿವ್ ವರದಿಯಾಗಿದೆ.