-->
16ವರ್ಷಗಳ ಹಿಂದಿನ ಪ್ರಕರಣಕ್ಕೆ ಪತಿಗೆ 12ವರ್ಷ ಜೈಲು ಶಿಕ್ಷೆ- ಮನನೊಂದು ಪತ್ನಿ ಒಂದೂವರೆ ವರ್ಷದ ಮಗುವಿನೊಂದಿಗೆ ನೇಣಿಗೆ ಶರಣು

16ವರ್ಷಗಳ ಹಿಂದಿನ ಪ್ರಕರಣಕ್ಕೆ ಪತಿಗೆ 12ವರ್ಷ ಜೈಲು ಶಿಕ್ಷೆ- ಮನನೊಂದು ಪತ್ನಿ ಒಂದೂವರೆ ವರ್ಷದ ಮಗುವಿನೊಂದಿಗೆ ನೇಣಿಗೆ ಶರಣು


ಉಡುಪಿ: ಒಂದೂವರೆ ವರ್ಷದ ಮಗುವಿಗೆ ತಾಯಿ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜಾಲು ಹೆರಂಜೆ ಕ್ರಾಸ್ ಬಳಿ ಸೋಮವಾರ ನಡೆದಿದೆ.

ಸುಭಾಷ್ ಎಂಬವರ ಪತ್ನಿ ಸುಷ್ಮಿತಾ (23) ಹಾಗೂ ಒಂದೂವರೆ ವರ್ಷದ ಮಗು ಶ್ರೇಷ್ಠಾ ನೇಣಿಗೆ ಶರಣಾದವರು. 

ಪತಿ ಸುಭಾಷ್ ನಾಯ್ಕ್ ಜೈಲು ಶಿಕ್ಷೆ ವಿಚಾರವಾಗಿ ಬೆಂಗಳೂರಿಗೆ ತೆರಳಿದ್ದ ಸಂದರ್ಭ ಸುಷ್ಮಿತಾ ದುರಂತ ಸಾವು ತಂದುಕೊಂಡಿದ್ದಾರೆ. ತನ್ನ ಸಾವಿಗೆ ತಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.

2009ರಲ್ಲಿ ನೆರೆಮನೆಯ ವಿನ್ಸೆಂಟ್ ಪಾಯಸ್ ಎಂಬವರ ಮೇಲೆ ಸುಭಾಷ್‌ ಮತ್ತು ಮನೆಯವರು ಹಲ್ಲೆ ನಡೆಸಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಆ ಬಳಿಕ ವಿಚಾರಣೆ ನಡೆದು 2012ರಲ್ಲಿ ಜಿಲ್ಲಾ ನ್ಯಾಯಾಲಯ ಸುಭಾಷ್, ಆತನ ತಾಯಿ ಮತ್ತು ಸೋದರನಿಗೆ 12 ವರ್ಷಗಳ ಗರಿಷ್ಠ ಶಿಕ್ಷೆ ವಿಧಿಸಿತ್ತು. ಸುಭಾಷ್‌ ಕುಟುಂಬ ಜಿಲ್ಲಾ ಕೋರ್ಟ್ ನೀಡಿದ್ದ ಶಿಕ್ಷೆಯ ತೀರ್ಪನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಸುದೀರ್ಘ 12 ವರ್ಷಗಳ ವಾದ- ಪ್ರತಿವಾದ ನಡೆದ ಬಳಿಕ ಕಳೆದ ಜುಲೈ ತಿಂಗಳಲ್ಲಿ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು. ಇದರಿಂದಾಗಿ ತಾಯಿ, ಮಕ್ಕಳು 12 ವರ್ಷಗಳ ಶಿಕ್ಷೆ ಅನುಭವಿಸಬೇಕಿತ್ತು.

ಇದೇ ವಿಚಾರದಲ್ಲಿ ವಕೀಲರ ಜೊತೆಗೆ ಚರ್ಚಿಸಲು ಸುಭಾಷ್‌ ಬೆಂಗಳೂರು ತೆರಳಿದ್ದರು. ಅಲ್ಲದೆ, ಶಿಕ್ಷೆಯ ವಿಚಾರದಲ್ಲಿ ಕುಟುಂಬಸ್ಥರು ತೀವ್ರ ಚಿಂತೆಗೆ ಒಳಗಾಗಿದ್ದರು. 16 ವರ್ಷಗಳ ಹಿಂದಿನ ಕೇಸಿನ ಬಗ್ಗೆ ತಿಳಿಯದೆ ಸುಭಾಷ್ ಜೊತೆಗೆ ಸುಷ್ಮಿತಾ ಮದುವೆಯಾಗಿತ್ತಲ್ಲದೆ, ಮಗುವೂ ಆಗಿತ್ತು. ಈಗ ಪತಿಗೆ ಶಿಕ್ಷೆ ಘೋಷಣೆ ಆಗಿದ್ದನ್ನು ತಿಳಿದು ಸುಷ್ಮತಾ ತೀವ್ರ ನೊಂದುಕೊಂಡು ಸಾವಿಗೆ ಶರಣಾಗಿದ್ದಾರೆ ಎನ್ನುವ ಶಂಕೆ ಇದೆ. ಆದರೆ ಡೆತ್ ನೋಟ್ ನಲ್ಲಿ ಈ ಬಗ್ಗೆ ಉಲ್ಲೇಖ ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ಹರಿರಾಮ್ ಶಂಕರ್ ಕೂಡ ತೆರಳಿ ಪರಿಶೀಲನೆ ಮಾಡಿದ್ದಾರೆ. ಕೊಲೆಯತ್ನ ಪ್ರಕರಣದಲ್ಲಿ 7ರಿಂದ 12 ವರ್ಷ ಅಥವಾ ಜೀವಾವಧಿ ಶಿಕ್ಷೆ ನೀಡುವುದಕ್ಕೂ ಅವಕಾಶ ಇದೆ. ಸುಭಾಷ್ ಪ್ರಕರಣದಲ್ಲಿ ನ್ಯಾಯಾಲಯ ಇಡೀ ಕುಟುಂಬಕ್ಕೆ ಗರಿಷ್ಠ ಶಿಕ್ಷೆಯನ್ನೇ ನೀಡಿತ್ತು.

Ads on article

Advertise in articles 1

advertising articles 2

Advertise under the article