STATE

UDUPI : ಚಿರತೆ ದಾಳಿ ವ್ಯಕ್ತಿ ಗಂಭೀರ

ಚಿರತೆ ದಾಳಿಯಿಂದ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡ ಘಟನೆ ಉಡುಪಿಯ ಕೊಲ್ಲೂರು ಸಮೀಪದ ನಾಗೋಡಿ (ನಿಟ್ಟೂರು) ಘಾಟಿಯ ಕಂಚಿಕೆರೆ ಎಂಬಲ್ಲಿ ನಡೆದಿದೆ. 
ಗಣೇಶ್ (48) ಚಿರತೆ ದಾಳಿಯಿಂದ ಗಂಭೀರ ಗಾಯಗೊಂಡವರು.  ತಡರಾತ್ರಿ 2 ಗಂಟೆಗೆ, ಮನೆ ಮಂದಿ ಸಾಕು ನಾಯಿ ಕೂಗಾಟವನ್ನು ಕೇಳಿ ಎಚ್ಚೆತ್ತಿದ್ದಾರೆ. ಈ ವೇಳೆ  ಮನೆ ಯಜಮಾನ ಗಣೇಶ್ (48) ಬಾಗಿಲು ತೆರೆದು ಮನೆಯಿಂದ ಹೊರ ಬಂದಾಗ ಗಣೇಶ್ ಅವರ ಮೇಲೆ ಚಿರತೆ ಎರಗಿದೆ. ಮನೆಯವರ ಬೊಬ್ಬೆ ಹೊಡೆದಾಗ ಅಕ್ಕಪಕ್ಕದವರು  ಬಂದಾಗ ಚಿರತೆ  ಹೋಗಿದೆ. ಗಂಭೀರ ಗಾಯಗೊಂಡ ಗಣೇಶ್ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟ್ಯಾಗ್‌ಗಳು: STATE