ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

UDUPI : ಹೆಬ್ಬಾವು ಹಿಡಿಯೋಕೆ ಜೆಸಿಬಿ ಬಂದದ್ದು ಎಲ್ಲಾದ್ರೂ ಕೇಳಿದ್ರಾ..!

ಉಡುಪಿ ಜಿಲ್ಲೆಯ ಕಾಪು ನಗರದಲ್ಲಿ ಇರೋ, ಗ್ರಂಥಾಲಯದ ಬಳಿ ಹೆಬ್ಬಾವು ಕಾಣಿಸಿಕೊಂಡು ಕೆಲ ಕಾಲ ಆತಂಕಕ್ಕೆ ಕಾರಣವಾಯ್ತು. ಗ್ರಂಥಾಲಯದ ಬಳಿ ಹೆಬ್ಬಾವು ಇದೆ ಅಂದಾಗ ಕೆಲವರು ಗಾಬರಿಗೊಂಡ ಸ್ಥಳದಿಂದ ಕಾಲ್ಕಿತ್ತಿದ್ದು ಆಯ್ತು. ಕಾಪು ಸಿಟಿಯಲ್ಲಿ ಎಲ್ಲರ ಬಾಯಲ್ಲೂ ಹೆಬ್ಬಾವಿನದ್ದೇ ಸುದ್ದಿ. ಅಷ್ಟೇ ಅಲ್ದೇ ಅರಣ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಲಾಯಿತು. ಆದ್ರೆ ಹೆಬ್ಬಾವು ಎಲ್ಲಿ ಹೋಗಿದೆ ಅಂತ ಯಾರಿಗೂ ಗೊತ್ತಿಲ್ಲ. ಗ್ರಂಥಾಲಯ ಪಕ್ಕ ದೊಡ್ಡ ಪೊದೆ ಇದ್ದ ಕಾರಣ, ಹೆಬ್ಬಾವು ಹುಡುಕೋಕೆ ಕೊನೆಗೆ ಸಿಬಿಸಿ ಬರಬೇಕಾಯ್ತು ನೋಡಿ. ಜೆಪಿಬಿ‌ ಬಂದು  ಪೊದೆ ಸರಿಸಿದಾಗ ಹೆಬ್ಬಾವು ಕಾಣ ಸಿಕ್ಕಿತ್ತು. 
ಬಳಿಕ  ಸ್ಥಳೀಯ ಉರಗ ತಜ್ಞ ಶಿವಾನಂದ ಪೂಜಾರಿ  ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಶಿವಾನಂದ್ ಹೆಬ್ಬಾವು ಹಿಡಿಯುವಲ್ಲಿ ಯಶಸ್ವಿಯಾದರು.  ಅರಣ್ಯ ಅಧಿಕಾರಿಗಳು ನಗರದಲ್ಲಿ ಆತಂಕಕ್ಕೆ ಕಾರಣವಾದ ಹೆಬ್ಬಾವುವನ್ನು ತೆಗೆದುಕೊಂಡು ಹೋಗಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಇತ್ತ ಗ್ರಂಥಾಲಯ ಸಿಬ್ಬಂದಿ,‌ಓದುಗರು ನಿಟ್ಟುಸಿರು ಬಿಡುವಂತಾಯಿತು..

ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW