ಕಾಟನ್ ಪೇಟೆ ಗೇಟ್ ನಲ್ಲಿ ಮಾದಕ ನಟಿ ಸನ್ನಿ ಲಿಯೋನ್..!!
Wednesday, July 7, 2021
ಬೆಂಗಳೂರು: ಈಗಾಗಲೇ ಮೂರು ಬಾರಿ ಕನ್ನಡದಲ್ಲಿ ನಟಿಸಿರುವ ಮಾದಕ ನಟಿ ಸನ್ನಿ ಲಿಯೋನ್ ಇದೀಗ ಕನ್ನಡ ಮತ್ತೊಂದು ಸಿನಿಮಾದಲ್ಲಿ ಸೊಂಟ ಬಳುಕಿಸೋಕೆ ರೆಡಿಯಾಗಿದ್ದಾರೆ.
ಕಾಟನ್ ಪೇಟೆ ಗೇಟ್ ನಲ್ಲಿ ತಮ್ಮ ಸೊಂಟ ಬಳುಕಿಸಲು ರೆಡಿಯಾಗಿದ್ದಾರೆ. ಈ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಲು ಸನ್ನಿ ಮತ್ತೊಮ್ಮೆ ಸಜ್ಜಾಗಿದ್ದಾರೆ.
ಸ್ಯಾಂಡಲ್ ವುಡ್ ನಿರ್ಮಾಪಕ ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡಿರೋ ಸಿನಿಮಾದಲ್ಲಿ ಸನ್ನಿ ಹೆಜ್ಜೆ ಹಾಕಿಲಿದ್ದಾರೆ. ಸನ್ನಿ ಜೊತೆ ಶ್ರೀನಿವಾಸ್ ಕೂಡ ಹೆಜ್ಜೆ ಹಾಕಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.