ಆಸಿಫ್ (19) ಹೆಸರಿನ ಯುವಕ ತನ್ನ ತಂದೆ ಜವಾದ್ ಅಲಿ, ತಾಯಿ ಇರಾ ಬೀಬಿ, ತಂಗಿ ಆರಿಫಾ ಹಾಗೂ ಅಜ್ಜಿ ಅಲೆಕ್ಜಾನ್ರನ್ನು ಕೊಲೆ ಮಾಡಿದ್ದಾನೆ. ನಂತರ ಅವರ ದೇಹಗಳನ್ನು ವಾಟರ್ ಟ್ಯಾಂಕ್ನಲ್ಲಿ ಮುಚ್ಚಿಟ್ಟಿದ್ದಾನೆ
ಈ ಘಟನೆ ಕಳೆದ ಫೆಬ್ರವರಿ ನಡೆದಿದ್ದು ಹಲವು ತಿಂಗಳುಗಳ ಬಳಿಕ ಬೆಳಕಿಗೆ ಬಂದಿದೆ. ಆಸಿಫ್ನ ಅಣ್ಣ ತನ್ನ ಕುಟುಂಬದ ನಾಲ್ವರು ಸದಸ್ಯರು ಕಾಣೆಯಾಗಿದ್ದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಆಸಿಫ್ ನ ಮೇಲೆ ಕಣ್ಣಿಟ್ಟ ಪೊಲೀಸರು ಆತನನ್ನು ವಿಚಾರಣೆ ನಡೆಸಿದಾಗ ಶವಗಳನ್ನು ಬಚ್ಚಿಟ್ಟಿರುವ ಜಾಗ ತೋರಿಸಿದ್ದಾನೆ.