-->
ads hereindex.jpg
ಬೆಡ್ ಬ್ಲಾಕ್ ಹಿಂದೆ ಮುಸ್ಲಿಂ ಸಂಘಟನೆಗಳ ಕೈವಾಡದ ಅನುಮಾನ ವ್ಯಕ್ತಪಡಿಸಿದ ಈಶ್ವರಪ್ಪ- ತಿರುಗೇಟು ನೀಡಿದ ಖಾದರ್ ( video)

ಬೆಡ್ ಬ್ಲಾಕ್ ಹಿಂದೆ ಮುಸ್ಲಿಂ ಸಂಘಟನೆಗಳ ಕೈವಾಡದ ಅನುಮಾನ ವ್ಯಕ್ತಪಡಿಸಿದ ಈಶ್ವರಪ್ಪ- ತಿರುಗೇಟು ನೀಡಿದ ಖಾದರ್ ( video)


ಶಿವಮೊಗ್ಗ/ ಮಂಗಳೂರು

ಬೆಂಗಳೂರಿನಲ್ಲಿ ಬೆಡ್ ಬ್ಲಾಕ್ ದಂಧೆ ಹಿಂದೆ ಮುಸ್ಲಿಂ ಸಂಘಟನೆಗಳ ಕೈವಾಡ ಇರಬಹುದೆಂದು ಸಚಿವ ಈಶ್ವರಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ.  ಇದಕ್ಕೆ ಮಂಗಳೂರಿನಲ್ಲಿ ಮಾಜಿ ಸಚಿವ ಖಾದರ್ ತಿರುಗೇಟು ನೀಡಿದ್ದಾರೆ. ( ವಿಡಿಯೋ ನೋಡಿ)
ಖಾದರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು ಕೆಳಗಿನಂತಿದೆ

▪️ಬಿಬಿಎಂಪಿ ವ್ಯಾಪ್ತಿಯಲ್ಲಿ 8 ವಲಯಗಳಿದ್ದು ಅದರಲ್ಲಿ ಬೆಂಗಳೂರು ದಕ್ಷಿಣ ವಲಯ ವಾರ್ ರೂಮ್ ಜವಾಬ್ದಾರಿ ತುಳಸಿ ಮದ್ದೇನಿ ಮತ್ತು ವೀರಭದ್ರಯ್ಯ ಅವರದ್ದಾಗಿದ್ದು ದಕ್ಷಿಣ ವಲಯಕ್ಕೆ ಸಂಬಂಧಿಸದ ಸರ್ಪರಾಜ್ ಖಾನ್ ಅವರ ವಿರುದ್ದ ಆರೋಪ ಮಾಡಿದ್ದು ಏಕೆ?

▪️ತುಳಸಿ ಮದ್ದೇನೇನಿ ಹಾಗೂ ವೀರಭದ್ರಯ್ಯ ನವರೇ ಜಾಹಿರಾತು ಕರೆದು ಅರ್ಜಿ ಸ್ವೀಕರಿಸಿ ವಾಕಿನ್ ಇಂಟರ್ವ್ಯೂ  ನಡೆಸಿ 214 ಸಿಬ್ಬಂದಿ ನೇಮಕಾತಿ ಮಾಡಿದ್ದಾರೆ.ಆ ಪೈಕಿ 17 ಮಂದಿ ಮಾತ್ರ ಅಲ್ಪಸಂಖ್ಯಾತಸಮುದಾಯಕ್ಕೆ ಸೇರಿದವರು,ಹಾಗೇ 7 ರಿಂದ 8 ವೈದ್ಯರ ಪೈಕಿ 1 ಇಬ್ಬರು ಮಾತ್ರ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು.ಈಗಿರುವವಾಗ ಪ್ರಕರಣದಲ್ಲಿ ಒಂದು ಸಮುದಾಯವನ್ನೇ ಗುರಿಯಾಗಿರಿಸಿ ಹೆಸರು ಪ್ರಸ್ತಾಪಿಸಿರುವ ಹಿಂದಿನ ಉದ್ದೇಶ ಏನು ?

▪️ಇದು ಕಾಲ್ ಸೆಂಟರ್ ಮಾದರಿ ಕೆಲಸವಾಗಿದ್ದು ಕರೆ ಸ್ವೀಕರಿಸಿ ಮಾಹಿತಿ ನೀಡುವದಷ್ಟೇ ಇವರ ಕೆಲಸ,ಇಷ್ಟಕ್ಕೂ
ಈ ಅಧಿಕಾರಿಗಳು ವಾಕಿನ್ ಇಂಟರ್ ವ್ಯೂ ಮಾಡಿದಾಗ ನಿಮಗೆ ಮಾಹಿತಿ ಇರಲಿಲ್ಲವೇ?

ದಕ್ಷಿಣ ವಲಯದ‌ ಸಂಭಂಧಿಸಿದ ಅಧಿಕಾರಿ ಯಾರು ಎಂಬುದು ನಿಮಗೆ ಗೊತ್ತಿರಲಿಲ್ಲವೇ?ಮಾಹಿತಿ ಇಲ್ಲದೇ ಮಾತನಾಡಿದ್ದರೆ ಅದು ನಿಮ್ಮ ಅಪ್ರಬುದ್ದತೆ ತೋರಿಸುತ್ತದೆ ಸಂಸದರಾಗಿರುವವರಿಗೆ ಮಾಹಿತಿಯ ಕೊರತೆ ಇದೆ ಎಂಬ ಸಂದೇಶ ರವಾನೆಯಾಗುತ್ತದೆ.ಇನ್ನೂ ವಿಚಾರ ಗೊತ್ತಿದ್ದು ಗೊತ್ತಿಲ್ಲದವರಂತೆ ಆರೋಪಿಸಿರುವುದರ ಹಿಂದಿನ ದುರುದ್ದಶವೇನು?

▪️ಇದು ಚಾಮರಾಜ‌ನಗರ ಸಾವಿನ ಘಟನೆಯನ್ನ ಜನರ ಗಮನದಿಂದ ಬೇರೆಡೆಗೆ ಸೆಳೆಯುವವ ಯತ್ನವೇ,ಚಾಮರಾಜ‌ನಗರದಲ್ಲಿ ಜನ ಸಾಲು ಸಾಲಾಗಿ ಸತ್ತಾಗ ನೀವು ತುಟಿ ಬಿಚ್ಚಲಿಲ್ಲ ಏಕೆ?

▪️ರಾಜ್ಯದಲ್ಲಿ ಕೊರತೆಯಾಗಿರುವ
ಆಕ್ಸಿಜನ್ ಪೂರೈಕೆಗೆ ಕೇಂದ್ರದಿಂದ  ಮ ನೆರವು ಕೊಡಿಸಲು ಇದೇ ಆಸಕ್ತಿ ತೋರಿಸಲ್ಲ ಏಕೆ?

▪️ಈಗಾಗಲೇ ಸಿಸಿಬಿ ತನಿಖೆ ನಡೆಸುತ್ತಿದ್ದು ತನಿಖೆಯಲ್ಲಿ ನೀವು ಹೆಸರಿಸಿದ ವ್ಯಕ್ತಿಗಳ ಪಾತ್ರವಿಲ್ಲದೇ ಇದ್ದರೆ ನೀವು ಕ್ಷಮೆ ಕೇಳುವಿರಾ ಅಥವಾ ರಾಜೀನಾಮೆ‌ ನೀಡುವಿರಾ?

▪️ನಿಮ್ಮ ಆರೋಪ ಉಲ್ಟಾ ಚೋರ್ ಚೌಕಿದಾರ್ ಕೋ ದಾಟ ಎಂಬಂತಿದೆ,
ನಿಮ್ಮ ಸರ್ಕಾರದ ಅಡಿಯಲ್ಲೇ ದಂಧೆ ನಡೆಯುತ್ತಿದ್ದರು ಅದನ್ನ ತಡೆಯಲಾಗಿದೆ ಈಗ ಇಷ್ಟೆಲ್ಲಾ ಹೈಡ್ರಾಮಾ ಏಕೆ?

▪️ಮಗುವಿಗೆ ಚಿವುಟೋದು ನೀವೇ
ತೋಟ್ಟಿಲು ತೂಗೋದು ನೀವೇ,ಆತ್ಮ ನಿರ್ಭರ ಭಾರತದ ಹೆಸರಲ್ಲಿ ಆತ್ಮ ಬರ್ಭರತೆ ಸೃಷ್ಠಿಸುತ್ತಿದ್ದೀರಿ ಏಕೆ?

Ads on article

Advertise in articles 1

suvidha.jpg

advertising articles 2

Advertise under the article

SNM4.jpeg CLICK-HERE