-->

ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು: ಸೀತಾರಾಮ ಬಂಗೇರ

ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು: ಸೀತಾರಾಮ ಬಂಗೇರ


ಮಂಗಳೂರು ತಾಲೂಕಿನ ಕೊಲ್ಯ ಗ್ರಾಮದ ಸೀತಾರಾಮ ಬಂಗೇರ ಜನಪ್ರಿಯ ವ್ಯಕ್ತಿತ್ವ. ಧಾರ್ಮಿಕ ಹಾಗೂ ಸಾಮಾಜಿಕ ರಂಗಗಳಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ 2020ನೇ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕಳೆದ ಐದು ದಶಕಗಳಿಂದ ನಿರಂತರವಾಗಿ ಸಮಾಜ ಸೇವೆ ಮಾಡುತ್ತಾ ಬಂದಿರುವ ಸೀತಾರಾಮ ಬಂಗೇರ ಕುಂಜತ್ತೂರು ಅಡ್ಕ ಮಲರಾಯ ಪರಿವಾರ ದೈವಸ್ಥಾನ , ಬಂಗೇರ ಕುಟುಂಬ ನಾಗಮೂಲಸ್ಥಾನದ ಗುರಿಕಾರರಾಗಿ ನಮಗೆಲ್ಲ ಮಾರ್ಗದರ್ಶಕರಾಗಿ ಧಾರ್ಮಿಕವಾಗಿ ಗುರುಸಿಸಿಕೊಂಡಿದ್ದಾರೆ.

ನಾಗಮೂಲಸ್ಥಾನದ ಜೀರ್ಣೋದ್ಧಾರ ಮಾಡಬೇಕೆಂಬ ಸಂಕಲ್ಪ ಮಾಡಿ , ಜೀರ್ಣೋದ್ಧಾರ ಸಮಿತಿಗೆ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ. ಅವರ ಮಾರ್ಗದರ್ಶನದಲ್ಲಿ ಸುಮಾರು 8000 ಮಂದಿ ಕುಟುಂಬದ ಸದಸ್ಯರನ್ನು ಸೇರಿಸಿ , ಶ್ರೀ ಮಲರಾಯ ಪರಿವಾರ ದೈವಗಳಿಗೆ ನೂತನ ದೈವಸ್ಥಾನ ಹಾಗೂ ಅಭೂತ ಪೂರ್ವ ತರವಾಡು ಮನೆ ನಿರ್ಮಾಣ ಮಾಡಿ 2012 ರಲ್ಲಿ ಬ್ರಹ್ಮಕಲಶ ನಡೆದಿದೆ.

ಅವರಿಗೆ ಅರ್ಹವಾಗಿಯೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ ಸಂದಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99