ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ಕೊಡಗಿನಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ತಲಕಾವೇರಿ ಅರ್ಚಕ ಸೇರಿದಂತೆ 6 ಮಂದಿ ಕಣ್ಮರೆ



(ಗಲ್ಫ್ ಕನ್ನಡಿಗ)ಕೊಡಗು ಜಿಲ್ಲೆಯಲ್ಲಿ  ಧಾರಾಕಾರ ಮಳೆಗೆ  ಬ್ರಹ್ಮಗಿರಿ ಗುಡ್ಡ ಕುಸಿದು, 6 ಮಂದಿ ಕಣ್ಮರೆಯಾಗಿರುವ ಘಟನೆ ನಡೆದಿದೆ.



(ಗಲ್ಫ್ ಕನ್ನಡಿಗ)ತಲಕಾವೇರಿಯ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ಎರಡು ಅರ್ಚಕ ಕುಟುಂಬಗಳ ಮನೆ ಮೇಲೆ  ಬ್ರಹ್ಮಗಿರಿ ಗುಡ್ಡ ಕುಸಿದಿದ.ತಲಕಾವೇರಿಯ ಪ್ರಧಾನ ಅರ್ಚಕ ನಾರಾಯಣ ಆಚಾರ್, ಅವರ ಪತ್ನಿ ಶಾಂತಲಾ, ಸಹೋದರ ವಿಠ್ಠಲ ಆಚಾರ್, ಕುಂದಾಪುರ ಮೂಲದ (38) ವರ್ಷದ ಇಬ್ಬರು ಯುವಕರು ಹಾಗೂ ಅಡುಗೆ ಕೆಲಸ ಮಾಡುತ್ತಿದ್ದ ಮಹಿಳೆ ಕಣ್ಮರೆಯಾಗಿದ್ದಾರೆ. ಘಟನೆಯಲ್ಲಿ ಒಟ್ಟು 6 ಮಂದಿ ಕಣ್ಮರೆಯಾಗಿದ್ದಾರೆ.

 (ಗಲ್ಫ್ ಕನ್ನಡಿಗ)ಘಟನಾ ಸ್ಥಳಕ್ಕೆ ಎನ್‌ಡಿ‌ಆರ್‌ಎಫ್ ತಂಡ ಆಗಮಿಸಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಇವರ ಜೊತೆಗೆ ಸ್ಥಳೀಯ ಅಧಿಕಾರಿಗಳು ಕೈಜೋಡಿಸಿದ್ದಾರೆ.

(ಗಲ್ಫ್ ಕನ್ನಡಿಗ)ಒಟ್ಟು 8 ಎಕರೆ ವ್ಯಾಪ್ತಿಯಲ್ಲಿ ಗುಡ್ಡ ಕುಸಿದಿದ್ದು ಬೆಳಗ್ಗೆ 7 ಗಂಟೆಗೆ ತೋಟದ ರೈಟರ್  ಅಲ್ಲಿಗೆ ಹೋದ ಸಂದರ್ಭದಲ್ಲಿ  ಘಟನೆ ಬೆಳಕಿಗೆ ಬಂದಿದೆ.

(ಗಲ್ಫ್ ಕನ್ನಡಿಗ)
ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW