ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

23 Lakh ಕೊಟ್ಟು ಖರೀದಿಸಿದ ಕಪ್ಪು ಕುದುರೆಯನ್ನು ಸ್ನಾನ ಮಾಡಿಸಿದಾಗ ನಡೆಯಿತು ಅಚ್ಚರಿ!

ಚಂಡೀಗಡ: 23 ಲಕ್ಷ ರೂ. ಕೊಟ್ಟು ಖರೀದಿಸಿದ ಅಸಾಮಾನ್ಯ ಕುದುರೆಯನ್ನು ಸ್ನಾನ ಮಾಡಿಸಿದಾಗ ನಿಜ ಬಣ್ಣ ಬಹಿರಂಗ ಗೊಂಡಿರುವ  ಘಟನೆ ಪಂಜಾಬ್‍ನಲ್ಲಿ ನಡೆದಿದೆ.

ಕಪ್ಪು ಬಣ್ಣದ ಕುದುರೆಗಳು ಇತರ ಬಣ್ಣಗಳ ಕುದುರೆಗಳಿಗೆ ಹೋಲಿಸಿದರೆ ಹೆಚ್ಚಿನ ಬೆಲೆಯನ್ನು ಹೊಂದಿದ್ದು, ಅಸಾಮಾನ್ಯ ಕುದುರೆ ಎನ್ನಲಾಗುತ್ತದೆ. ಇದೀಗ ಸಂಗ್ರೂರ್ ಜಿಲ್ಲೆಯ ಸುನಮ್ ನಗರದ ರಮೇಶ್ ಕುಮಾರ್, ಈ ಕುದುರೆಯನ್ನು ಖರೀದಿಸಿ ಮೋಸ ಹೋಗಿದ್ದಾರೆ.

ವ್ಯಾಪಾರಿಗಳಿಂದ ಖರೀದಿಸಿದ ಕುದುರೆಯನ್ನು ಮನೆಗೆ ಕರೆತಂದ ಕುಮಾರ್, ಅದಕ್ಕೆ ಸ್ನಾನ ಮಾಡಿಸಿದ್ದಾನೆ. ಈ ವೇಳೆ ಅದರ ಮೇಲಿದ್ದ ಕಪ್ಪು ಬಣ್ಣ ಹೋಗಿ ಕೆಂಪು ಬಣ್ಣ ಕಾಣಿಸತೊಡಗಿದೆ.
ಈ ಸಂಬಂಧ ಕುಮಾರ್ ಪೊಲೀಸರಿಗೆ ದೂರು ನೀಡಿದ್ದ. ಇದೀಗ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW