-->

ಉಡುಪಿಯಲ್ಲಿ ನಡೆದ ಯಕ್ಷಗಾನದಲ್ಲಿ ವಿಶೇಷ ಪ್ರಯತ್ನ- ಪ್ರತ್ಯಕ್ಷವಾದ ನಿಜವಾದ ಆನೆ!

ಉಡುಪಿಯಲ್ಲಿ ನಡೆದ ಯಕ್ಷಗಾನದಲ್ಲಿ ವಿಶೇಷ ಪ್ರಯತ್ನ- ಪ್ರತ್ಯಕ್ಷವಾದ ನಿಜವಾದ ಆನೆ!

ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲಿ  ಹೊಸ ಹೊಸ ಪ್ರಯೋಗಗಳು ನಡೆಯುತ್ತಿದೆ.

 ಇಂತಹ ಅಪರೂಪದ ಪ್ರಯತ್ನ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆಯಿತು. ಪ್ರಸಿದ್ಧವಾದ ಅಮರಾವತಿಯ ಅಮರಚರಿತ್ರೆ ಎಂಬ ಪ್ರಸಂಗದಲ್ಲಿ ದೇವೇಂದ್ರ ವೇಷಧಾರಿಯು ನಿಜವಾದ ಗಜರಾಜನ ಮೇಲೆ ರಂಗಸ್ಥಳ ಪ್ರವೇಶಿಸಿ ಜನರಲ್ಲಿ ರೋಮಾಂಚನವುಂಟು ಮಾಡಿದ್ದು ವಿಶೇಷವಾಗಿತ್ತು.

 ಯಾವತ್ತೂ ಭಾಗವತರ ಹಾಡಿಗೆ ಸೀಮಿತವಾಗಿದ್ದ ಆನೆಯ ಪ್ರವೇಶದ ಕಥನ, ಈ ಪ್ರದರ್ಶನದಲ್ಲಿ ನಿಜವಾದ ಆನೆಯನ್ನು ತರುವ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿತು. 

ತನ್ನ ಪಟ್ಟದ ಆನೆಯನ್ನು ಏರಿ ಬರುವ ದೇವೇಂದ್ರನ ಅಪರೂಪದ ಚಿತ್ರಣ ಯಕ್ಷಗಾನ ಪ್ರೇಕ್ಷಕರಿಗೆ ಇನ್ನಿಲ್ಲದ ಸಂತೋಷ ನೀಡಿತು. ಪ್ರೇಕ್ಷಕರು ನಿಜ ಆನೆ ಕಂಡು ಸಂತಸಗೊಂಡರು..





Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99