-->

Mangalore: 14 ನೇ ಮಹಡಿಯಿಂದ ಹಾರಿ ಮಹಿಳೆ ಸುಸೈಡ್- ಇವರು ಏರ್ ಇಂಡಿಯಾ ನಿವೃತ್ತ ಮೆನೆಜರ್

Mangalore: 14 ನೇ ಮಹಡಿಯಿಂದ ಹಾರಿ ಮಹಿಳೆ ಸುಸೈಡ್- ಇವರು ಏರ್ ಇಂಡಿಯಾ ನಿವೃತ್ತ ಮೆನೆಜರ್

ಮಂಗಳೂರು: ಮಂಗಳೂರಿನ ಕುಲಶೇಖರ ದಲ್ಲಿ ಮಹಿಳೆಯೊಬ್ಬರು ಅಪಾರ್ಟ್ಮೆಂಟ್ ನ 14 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.



ಕುಲಶೇಖರ ಚೌಕಿ ಪ್ಲಾಮ ಗ್ರಾಂಡ್ ಅಪಾರ್ಟ್ ಮೆಂಟ್ ನ 14 ನೇ ಮಹಡಿಯಲ್ಲಿ ವಾಸಿಸುತ್ತಿರುವ ಪುಷ್ಪಲತಾ (64) ಆತ್ಮಹತ್ಯೆ ಮಾಡಿದವರು.
 
ಇವರ ಗಂಡ ಇಂದು ಬೆಳಿಗ್ಗೆ ತರಕಾರಿ ತರಲು ಮಾರುಕಟ್ಟೆ ಗೆ ಹೋಗಿದ್ದ ಸಂದರ್ಭದಲ್ಲಿ ಅವರು ತಮ್ಮ ಮನೆಯ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಾನಸಿಕ ಖಿನ್ನತೆಗೊಳಗಾದ ಇವರು ಈ ಹಿಂದೆಯು ಆತ್ಮಹತ್ಯೆಗೆ ಯತ್ನಿಸಿದ್ದರು. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುಷ್ಪಲತಾ ಅವರು ಮುಂಬಯಿನಲ್ಲಿ ಏರ್ ಇಂಡಿಯಾದಲ್ಲಿ ಮೆನೆಜರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿದ್ದರು. ಸುಮಾರು 10 ವರ್ಷದಿಂದ ಮಂಗಳೂರಿನಲ್ಲಿ ವಾಸವಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99