ತನ್ನ ಫೋಟೋಗೆ 'ಸೂಪರ್ ಮೊಲೆ' ಎಂದು comment ಮಾಡಿದ ಯುವಕನಿಗೆ ಈ ಮಲಯಾಳಿ ನಟಿ ನೀಡಿದ ಉತ್ತರವೇನು ಗೊತ್ತಾ?
Wednesday, May 19, 2021
ತಿರುವನಂತಪುರಂ: ತನ್ನ ಫೋಟೋಗೆ 'ಮೊಲೆ ಸೂಪ್ಪರ್' ಎಂದು ಕಮೆಂಟ್ ಮಾಡಿದ ಯುವಕನಿಗೆ ಮಲಯಾಳಿ ನಟಿ ಕಂ ನಿರೂಪಕಿ ಅಶ್ವಥಿ ಶ್ರೀಕಾಂತ್ ನೀಡಿದ ಉತ್ತರ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡತೊಡಗಿದೆ.
ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಕ್ರಿಯಾಶೀಲವಾಗಿರುವ ನಟಿ ಅಶ್ವಥಿ ತನ್ನ ಫೋಟೋ ಒಂದನ್ನು ತನ್ನ ಸಾಮಾಜಿಕ ಜಾಲತಾಣವೊಂದರ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಳು. ಇದಕ್ಕೆ ನಹಾಬ್ ನಹಾಬ್ಸ್ ಎಂಬ ಯುವಕ 'ಸೂಪರ್ ಮೊಲೆ' ಎಂದು ಕಮೆಂಟ್ ಮಾಡಿದ್ದ.
ಈತನಿಗೆ ಅಲ್ಲೇ ಕಮೆಂಟ್ ಮೂಲಕ ಉತ್ತರಿಸಿರುವ ನಟಿ "ಸೂಪರ್ ಆಗಿರಬೇಕು ತಾನೆ. ಯಾಕೆಂದರೆ ಇದು ಒಂದು ಮಗುವಿಗೆ ಎರಡು ವರ್ಷಗಳ ಕಾಲ ಎದೆಹಾಲು ಉಣಿಸಲು ಇರುವುದಾಗಿದೆ. ಈ ಮೂಲಕ ಜೀವವನ್ನೇ ಸಮರ್ಪಿಸುವ ಕಾರಣ ನಿಮ್ಮ ತಾಯಿ ಸಹಿತ ಎಲ್ಲಾ ಮಹಿಳೆಯರ ಮೊಲೆಯೂ ಸೂಪರ್ ಆಗಿದೆ" ಎಂದು ಮಾರ್ಮಿಕವಾಗಿ ಪ್ರತಿಕ್ರಯಿಸಿದ್ದಳು.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಹಲವರು ಈ ನಟಿಯ ಪರವಾಗಿ ನಿಂತಿದ್ದಾರೆ.