ಉಡುಪಿಯ 22 ವರ್ಷದ ಚೆಲುವೆ ಮಿಸ್ ಯುನಿವರ್ಸ್ ರನ್ನರ್ ಅಪ್
Monday, May 17, 2021
ಅಮೇರಿಕದ ಫ್ಲೋರಿಡಾದಲ್ಲಿ ಮೇ 16 ರಂದು ನಡೆದ ಮಿಸ್ ಯೂನಿವರ್ಸ್ 2020ರ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಉಡುಪಿ ಮೂಲದ 22 ವರ್ಷದ ಚೆಲುವೆ ಆಡ್ಲೈನ್ ಕ್ವಾಡ್ರೋಸ್ ಕ್ಯಾಸ್ಟೆಲಿನೊ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ.
2020 ರಲ್ಲಿ ನಡೆಯಬೇಕಿದ್ದ ಮಿಸ್ ಯುನಿವರ್ಸ್ ಸ್ಪರ್ಧೆಯನ್ನು ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ರದ್ದುಗೊಳಿಸಲಾಗಿತ್ತು. ನಂತರ ಈ ಸ್ಪರ್ಧೆಯನ್ನು ಮೇ 16 ರಂದು ನಡೆಸಲಾಯಿತು. ಈ ಸ್ಪರ್ಧೆಯಲ್ಲಿ ಜಗತ್ತಿನ ವಿವಿಧ ಭಾಗಗಳ 70 ಕ್ಕೂ ಅಧಿಕ ಸ್ಪರ್ಧಿಗಳು ಭಾಗಿಯಾಗಿದ್ದರು.
ಮಿಸ್ ಯೂನಿವರ್ಸ್ ಸ್ಪರ್ಧೆಗೆ ಭಾರತ ದೇಶವನ್ನು ಪ್ರತಿನಿಧಿಸಲು ಮಿಸ್ ದಿವಾ 2020 ಸ್ಪರ್ಧೆಯನ್ನು ಅವರು ಗೆದ್ದಿದ್ದರು. ಉಡುಪಿ ತಾಲೂಕಿನ ಉದ್ಯಾವರ ಮೂಲದವರಾದ ಆ್ಯಡ್ಲಿನ್ ಕುವೈತ್‌ನಲ್ಲಿ ಹುಟ್ಟಿದ್ದರು. ಅದರೆ ಅವರು ಶಿಕ್ಷಣ ಪೂರೈಸಿದ ಬಳಿಕ ಮುಂಬೈನಲ್ಲಿ ಉದ್ಯೋಗ ಮಾಡುತ್ತಿದ್ದಾರೆ.