ಮಂಗಳೂರು; ಮಂಗಳಾದೇವಿಯಲ್ಲಿ ಬಸ್ ಗೆ ಬಿತ್ತು ಬೆಂಕಿ - ರಾತ್ರಿ ಈ ಘಟನೆ ನಡೆಯಲು ಕಾರಣವೇನು?
Tuesday, May 18, 2021
ಮಂಗಳೂರು; ಮಂಗಳೂರಿನ ಮಂಗಳಾದೇವಿಯಲ್ಲಿ ರಾತ್ರಿ ನಿಂತಿದ್ದ ಬಸ್ ಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟ ಹೋದ ಘಟನೆ ನಡೆದಿದೆ.
ಮಂಗಳಾದೇವಿ ದೇವಸ್ಥಾನದ ಬಳಿಯಲ್ಲಿ ಈ ಬಸನ್ನು ಪಾರ್ಕಿಂಗ್ ಮಾಡಲಾಗಿತ್ತು. ಲಾಕ್ ಡೌನ್ ಹಿನ್ನೆಲೆಯಲ್ಲಿ ಬಸ್ ಕೆಲವು ದಿನಗಳಿಂದ ಇಲ್ಲಿಯೆ ನಿಂತಿತ್ತು. ರಾತ್ರಿ ಮೂರು ಗಂಟೆಗೆ ಬಸ್ ನಲ್ಲಿ ಕಾಣಿಸಿಕೊಂಡು ಬಸ್ ಸಂಪೂರ್ಣ ಸುಟ್ಟು ಹೋಗಿದೆ. ಬಸ್ ನ ಸೀಟುಗಳು ಭಸ್ಮವಾಗಿದ್ದು, ಬಸ್ ನ ಉಪಕರಣಗಳು ಸುಟ್ಟು ಕರಕಲಾಗಿದೆ. ಬಸ್ ನ ಗಾಜು ಬೆಂಕಿಯ ತೀವ್ರತೆಗೆ ಒಡೆದು ಹೋಗಿದೆ.
ಕಾರಣವೇನು?
ಬಸ್ ಗೆ ಬೆಂಕಿ ಹತ್ತಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ನಿಂತಿದ್ದಬಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿರಬಹುದೆಂದು ಅಂದಾಜಿಸಲಾಗಿದೆ . ಆದರೆ ಶಾರ್ಟ್ ಸರ್ಕ್ಯೂಟ್ ಕಾರಣವೊ ಅಥವಾ ಕಿಡಿಗೇಡಿಗಳಿಂದ ಈ ದುಷ್ಕೃತ್ಯ ನಡೆದಿದಿಯೋ ಎಂಬುದು ತಿಳಿದುಬರಬೇಕಿದೆ.