ಮಂಗಳೂರು; ದ.ಕ ಜಿಲ್ಲೆಯ 24 ವರ್ಷದ ಮಹಿಳಾ ಎಸ್ ಐ ಕೊರೊನಾಗೆ ಬಲಿ- 7 ತಿಂಗಳ ಗರ್ಭಿಣಿಯ ದುರಂತ ಅಂತ್ಯ
Tuesday, May 18, 2021
ಮಂಗಳೂರು ; ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಪ್ರೊಬೆಷನರಿ ಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಎಸ್ ಐ ಕೊರೊನಾಗೆ ಬಲಿಯಾಗಿದ್ದಾರೆ.
ಕೋಲಾರ ಮೂಲದ 24 ವರ್ಷದ ಶ್ಯಾಮಿಲಿ ಮಂಗಳೂರಿನಲ್ಲಿ ದ.ಕ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪ್ರೊಬೆಷನರಿ ಎಸ್ ಐ ಆಗಿದ್ದರು. ಅವರು 7 ತಿಂಗಳ ಗರ್ಭಿಣಿಯಾಗಿದ್ದು 2021 ಜನವರಿ 11 ರಂದು ರಜೆಯ ಮೇಲೆ ತನ್ನ ಊರು ಕೋಲಾರಕ್ಕೆ ತೆರಳಿದ್ದರು. ಅವರು ಕೊರೊನಾ ಪಾಸಿಟಿವ್ ಆದ ಬಳಿಕ ಮೇ 2 ರಂದು ಕೋಲಾರದ ಜಾಲಪ್ಪ ಹಾಸ್ಪಿಟಲ್ ಗೆ ಚಿಕಿತ್ಸೆಗೆ ದಾಖಲಾಗಿದ್ದರು . ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 4. 30 ಕ್ಕೆ ಕೊನೆಯುಸಿರೆಳೆದರು. ಗರ್ಭಿಣಿಯಾಗಿದ್ದ ಕಾರಣಕ್ಕೆ ಅವರು ಲಸಿಕೆ ತೆಗೆದು ಕೊಂಡಿರಲಿಲ್ಲ.