ಆ ಯುವತಿಯ ಕಿಸ್ ಭರವಸೆ ನಂಬಿ ಲಾಡ್ಜ್‌ಗೆ ಬಂದಾಗ ಆದದ್ದೇ ಬೇರೆ- ಇದೊಂದು ಮುತ್ತಿನ ಕಥೆ
Sunday, May 16, 2021
ಚಿತ್ತೂರು,: ತನಗೆ ನಿರಂತರ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಯುವಕನಿಗೆ ಯುವತಿಯೋರ್ವಳು ತಕ್ಕ ಶಾಸ್ತಿ ಮಾಡಿದ್ದಾಳೆ. ಕರೆ ಮಾಡಿ ಕಿರುಕುಳ ಕೊಡುತ್ತಿದ್ದ ಯುವಕನ ಕೋರಿಕೆ ಮೇರೆಗೆ ಮುತ್ತು ಕೊಡುತ್ತೇನೆಂದು ಹೊಟೇಲ್ ಗೆ ಕರೆಸಿ, ತನ್ನ ಸಹೋದರ ಮತ್ತು ಆತನ ಗೆಳೆಯರ ಮೂಲಕ ಚೆನ್ನಾಗಿ ಧರ್ಮದೇಟು ನೀಡಿದ್ದಾಳೆ.
ಕೆಲ ದಿನಗಳ ಹಿಂದೆ ಈ ಯುವತಿಯು ತನ್ನ ಗೆಳತಿಗೆಂದು ಮಾಡಿದ್ದ ಕರೆ ತಪ್ಪಿ ಚಿತ್ತೂರಿನ ಮದನಪಳ್ಳಿಯ ಮಹೇಶ್ ಎಂಬಾತನ ಮೊಬೈಲ್‌ಗೆ ಹೋಗಿತ್ತು. ಯುವತಿ ಇದು ರಾಂಗ್ ನಂಬರ್ ಎಂದು ಕರೆ ಕಟ್ ಮಾಡಿದ್ದರೂ ಮಹೇಶ್ ಮತ್ತೆ ಮತ್ತೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ. ದಯವಿಟ್ಟು ನನಗೆ ಕರೆ ಮಾಡಿ ಕಿರುಕುಳ ನೀಡಬೇಡ ಎಂದು ಯುವತಿ ಗೋಗೆರೆದಾಗ ನನಗೆ ಒಂದು ಕಿಸ್ ಕೊಡು ಮತ್ತೆ ನಾನು ಕಿರುಕುಳ ನೀಡಲ್ಲ ಎಂದಿದ್ದ.
ಈ ನಿಟ್ಟಿನಲ್ಲಿ ಆಯಿತು ಎಂದು ಒಪ್ಪಿಕೊಂಡಿದ್ದ ಯುವತಿಯು ಆತನನ್ನು ನಗರದ ಲಾಡ್ಜ್ ಒಂದಕ್ಕೆ ಬರ ಹೇಳಿದ್ದಳು.
ಸಿಹಿಮುತ್ತಿನ ನಿರೀಕ್ಷೆಯಲ್ಲಿ ರೂಮಿಗೆ ಹೋದ ಯುವಕನಿಗೆ ಅಲ್ಲಿ ಕಾದಿದ್ದೇ ಬೇರೆ. ಅಲ್ಲಿ ಯುವತಿಯ ಸಹೋದರ ಮತ್ತು ಆತನ ಗೆಳೆಯರು ಸೇರಿದ್ದು, ಯುವಕನನ್ನು ಹಿಗ್ಗಾ ಮಗ್ಗಾ ಥಳಿಸಿದ್ದಾರೆ.
ಆದರೆ ಯುವಕ ನೀಡಿದ ದೂರು ಮತ್ತು ಯುವಕನಿಗೆ ಥಳಿಸುತ್ತಿರುವ ವೈರಲ್ ವೀಡಿಯೋ ಆಧಾರಲ್ಲಿ ಯುವತಿ ಸಹೋದರ ಮತ್ತು ಐವರನ್ನು ಪೊಲೀಸರು ಬಂಧಿಸಿದ್ದಾರೆ.